ಹೊಸದಿಗಂತ ಡಿಜಿಟಲ್ ಡೆಸ್ಕ್:
ಪದ್ಮಶ್ರೀ ಪುರಸ್ಕೃತ ದರಿಪಲ್ಲಿ ರಾಮಯ್ಯ ತಮ್ಮ ಜಮೀನಿನಲ್ಲಿ ಬೆಳೆದ 20 ಟನ್ ರಕ್ತಚಂದನವನ್ನು ತೆಲಂಗಾಣ ಸರ್ಕಾರಕ್ಕೆ ನೀಡುವುದಾಗಿ ಘೋಷಿಸಿದ್ದಾರೆ. ತೆಲಂಗಾಣ ಸರ್ಕಾರ ಸ್ಥಾಪಿಸಿರುವ ಹರಿತ ನಿಧಿಗೆ ರಕ್ತಚಂದನ ದಾನ ಮಾಡಿದ್ದಾರೆ. ರಾಮಯ್ಯ ಅವರು ತಮ್ಮ ಪತ್ನಿ ಜಾನಮ್ಮ ಅವರ ಜೊತೆ ತಮ್ಮ ಸ್ವಂತ ಜಮೀನಿನಲ್ಲಿ ಸಸಿಗಳನ್ನು ಬೆಳೆಸುತ್ತಾರೆ. ಇಬ್ಬರೂ ಸೇರಿ ಜಮ್ಮಂ ಜಿಲ್ಲೆಯಲ್ಲಿ ಕಳೆದ 40 ವರ್ಷದಿಂದ ಮರಗಳನ್ನು ನೆಡುತ್ತಿದ್ದಾರೆ.
ತೆಲಂಗಾಣದಲ್ಲಿ ಕಾಡಿನ ಪ್ರಮಾಣ ಹೆಚ್ಚು ಮಾಡಲು ಅಲ್ಲಿನ ಸರ್ಕಾರ ನಿಧಿ ಸ್ಥಾಪಿಸಿದೆ. ಈ ನಿಧಿ ಮೂಲಕ ಹೆಚ್ಚೆಚ್ಚು ಹಸಿರೀಕರಣ ಮಾಡಲಾಗುತ್ತಿದೆ. ಹರಿತ ನಿಧಿಗೆ ರಾಮಯ್ಯ 20 ಟನ್ ರಕ್ತ ಚಂದನ ದಾನ ಮಾಡಿದ್ದಾರೆ. ನನ್ನ ಉಸಿರು ಇರುವವರೆಗೂ ಗಿಡಗಳನ್ನು ನೆಡುತ್ತಲೇ ಇರುತ್ತೇನೆ. ಸಮಾಜ ಸ್ವಸ್ಥವಾಗಿರಲು ಗಿಡಗಳನ್ನು ನೆಡುವುದು ಅತ್ಯಾವಶ್ಯ ಎಂದು ರಾಮಯ್ಯ ಹೇಳಿದ್ದಾರೆ.