ಭಾರತಕ್ಕೆ ಬಂದ ಪಾಕ್​​ ಡ್ರೋನ್: ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಸರಹದ್ದಿನಲ್ಲಿ ಇಂದು ಪಾಕಿಸ್ತಾನದ ಕ್ವಾಡ್​ಕಾಪ್ಟರ್ ಹಾರಾಟ ನಡೆಸಿದ್ದು, ಗಡಿಭದ್ರತಾ ಪಡೆ (ಬಿಎಸ್​ಎಫ್​) ಸಿಬ್ಬಂದಿ ನಾಲ್ಕು ಸುತ್ತು ಗುಂಡು ಹಾರಿಸಿದ ನಂತರ ಡ್ರೋನ್ ಪಾಕಿಸ್ತಾನದ ಪ್ರದೇಶಕ್ಕೆ ಮರಳಿತು. ಬೆಳಗ್ಗೆ ಗಡಿ ಭದ್ರತಾ ಪಡೆ ಮತ್ತು ಪಂಜಾಬ್ ಪೊಲೀಸರ ತಂಡವು ಆ ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆ ನಡೆಸಿದೆ.
ಇಂದು ತಡರಾತ್ರಿ 1.15ರ ಸುಮಾರಿಗೆ ಪಂಜಾಬಿನ ಅಮೃತಸರ ಸೆಕ್ಟರ್​​ನ ಧನೋಕಲನ್ ಗ್ರಾಮದ ಪ್ರದೇಶದಲ್ಲಿ ಪಾಕಿಸ್ತಾನ ಕಡೆಯಿಂದ ಅನುಮಾನಾಸ್ಪದವಾಗಿ ಹಾರಾಟ ನಡೆಸುತ್ತಿದ್ದ ವಸ್ತುವೊಂದು ಭಾರತೀಯ ಸರಹದ್ದಿನ ಒಳಹೊಕ್ಕಿರುವ ಸುಳಿವು ಬಿಎಸ್​ಎಫ್​ ಸಿಬ್ಬಂದಿಗೆ ಸಿಕ್ಕಿತು.
ತಕ್ಷಣ ಕಾರ್ಯಪ್ರವೃತ್ತರಾದ ಬಿಎಸ್​ಎಫ್ ಸಿಬ್ಬಂದಿ ಶೂಟ್ ಮಾಡಿ ಅದನ್ನು ಹೊಡೆದುರುಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!