ಭಾರತದ ಜೊತೆಗೆ ಅರ್ಥಪೂರ್ಣ ಮಾತುಕತೆ ಪಾಕ್ ಒಲವು: ಇಂಗಿತ ವ್ಯಕ್ತಪಡಿಸಿದ ಪ್ರಧಾನಿ ಶಹಬಾಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಗೊಂಡ ಶಹಬಾಜ್ ಷರೀಫ್, ಇದೀಗ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮೂಲಕ ಉಭಯ ರಾಷ್ಟ್ರಗಳ ನಡುವೆ ಅರ್ಥಪೂರ್ಣ ಮಾತುಕತೆ ಪರ ಇಂಗಿತ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರ ವಿಚಾರ ಸೇರಿದಂತೆ ಉಭಯ ದೇಶಗಳ ಮಧ್ಯೆ ಪರಿಹರಿಸಿಕೊಳ್ಳಲು ಬಾಕಿಯಿರುವ ವಿಚಾರಗಳ ಬಗ್ಗೆ ನಿರ್ಣಯವಾಗಬೇಕಿದೆ. ಆದಾಗ್ಯೂ, ಭಾರತದ ಜೊತೆಗೆ ಪಾಕಿಸ್ತಾನ ಶಾಂತಿಯುತ ಮತ್ತು ಸಹಭಾಗಿತ್ವದ ಸಂಬಂಧ ಬಯಸುತ್ತದೆ ಎಂದು ಅವರು ಹೇಳಿದ್ದಾರೆ.
ಶೆಹಬಾಜ್ ಷರೀಫ್ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ ಅಭಿನಂದನಾ ಸಂದೇಶದಲ್ಲಿ, ಭಯೋತ್ಪಾದನೆ ಮುಕ್ತ ಪ್ರದೇಶದಲ್ಲಿ ಭಾರತವು ಶಾಂತಿ ಮತ್ತು ಸ್ಥಿರತೆಯನ್ನು ಬಯಸುತ್ತದೆ ಎಂದು ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!