spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊನೆಗೂ ವಿವಾದಕ್ಕೆ ತೆರೆ ಎಳೆದ ಪಾಕ್: ವಿಶ್ವಕಪ್ ಜೆರ್ಸಿಯಲ್ಲಿ ‘ಇಂಡಿಯಾ 2021’ ಉಲ್ಲೇಖ!

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಕ್ಟೋಬರ್​​​ 17ರಿಂದ ಐಸಿಸಿ ಟಿ – 20 ವಿಶ್ವಕಪ್​ ಆರಂಭಗೊಳ್ಳುತ್ತಿದ್ದು, ಎಲ್ಲ ಕ್ರಿಕೆಟ್​ ತಂಡಗಳು ಸಜ್ಜಾಗಿವೆ. ಇದರ ಬೆನ್ನಲ್ಲೇ ಪಾಕ್​​​ ಜೆರ್ಸಿ ವಿಚಾರವಾಗಿ ಅನೇಕ ಆಕ್ರೋಶ, ಟ್ರೋಲ್​​ ಕೇಳಿ ಬಂದಿದ್ದವು. ಆದರೆ, ಇದೀಗ ಈ ವಿವಾದ ಸುಖ್ಯಾಂತ ಕಂಡಿದೆ.
ವಿಶ್ವಕಪ್​​​ ಭಾರತದಲ್ಲಿ ಆಯೋಜನೆಗೊಳ್ಳಬೇಕಾಗಿತ್ತು. ಆದರೆ, ಕೋವಿಡ್​​ನಿಂದಾಗಿ ದುಬೈನಲ್ಲಿ ಆಯೋಜನೆಯಾಗಿದ್ದು, ಆದರೆ ಇದರ ಆತಿಥ್ಯ ಮಾತ್ರ ಭಾರತದ್ದಾಗಿದೆ. ಹೀಗಾಗಿ ಟೂರ್ನಿಯಲ್ಲಿ ಭಾಗಿಯಾಗುತ್ತಿರುವ ಎಲ್ಲ ತಂಡಗಳು ತಮ್ಮ ಜೆರ್ಸಿ ಮೇಲೆ ‘ICC’Men’s T20 World Cup India ‘2021’ ಎಂದು ಬರೆದುಕೊಳ್ಳಬೇಕು.ಆದರೆ, ಪಾಕಿಸ್ತಾನ ಮಾತ್ರ ತಮ್ಮ ಜರ್ಸಿ ಮೇಲೆ ‘T20 World Cup UAE 2021’ ಎಂದು ಬರೆಯಿಸಿಕೊಂಡಿದೆ ಎನ್ನಲಾಗಿತ್ತು. ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದರಿಂದ ಸಿಕ್ಕಾಪಟ್ಟೆ ಆಕ್ರೋಶ ಕೂಡಾ ವ್ಯಕ್ತವಾಗಿತ್ತು.
ವಿಶ್ವಕಪ್​ ಟೂರ್ನಿಗಾಗಿ ಪಾಕಿಸ್ತಾನದಿಂದ ಇಂದು ಜೆರ್ಸಿ ಅನಾವರಣಗೊಂಡಿದ್ದು, ಅದರ ಮೇಲೆ ಇಂಡಿಯಾ 2021 ಎಂದು ಉಲ್ಲೇಖ ಮಾಡಲಾಗಿದೆ. ಇದರ ವಿಡಿಯೋ ಕೂಡ ಇದೀಗ ಪಿಸಿಬಿ ಅಧಿಕೃತ ಟ್ವಿಟರ್​ನಲ್ಲಿ ಅನಾವರಣಗೊಂಡಿದ್ದರಿಂದ ವಿವಾದ ಸುಖ್ಯಾಂತ ಕಂಡಿದೆ.
ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಅಕ್ಟೋಬರ್​​ 24ರಂದು ಸಾಂಪ್ರದಾಯಿಕ ಎದುರಾಳಿ ಪಾಕ್​ ವಿರುದ್ಧ ಮೊದಲ ಪಂದ್ಯವನ್ನಾಡುವ ಮೂಲಕ ತನ್ನ ಅಭಿಯಾನ ಆರಂಭ ಮಾಡಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss