ಸಿಪಿಇಸಿ ಯೋಜನೆಯಡಿ ಕರಾಚಿ- ಪೇಶಾವರ ರೈಲ್ವೆ ಯೋಜನೆಗೆ ಪಾಕ್- ಚೀನಾ ಒಪ್ಪಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚೀನಾ ಮಹತ್ವಾಕಾಂಕ್ಷೆಯ ಸಿಪಿಇಸಿ ಯೋಜನೆಯ ಪ್ರಮುಖ ಭಾಗವಾದ ಕರಾಚಿ- ಪೇಶಾವರ ರೈಲು ಮಾರ್ಗಕ್ಕೆ 1,000 ಕೋಟಿ ಅಮೆರಿಕನ್‌ ಡಾಲರ್ ವೆಚ್ಚದಲ್ಲಿ ನಿರ್ಮಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಮಾಧ್ಯಮ ವರದಿ ತಿಳಿಸಿದೆ. ಈ ಯೋಜನೆ ವಿವಿಧ ಕಾರಣಗಳಿಂದ ವಿಳಂಬಗೊಂಡಿತ್ತು.
ಪಾಕಿಸ್ತಾನದ ಪ್ರಧಾನಿ ಷರೀಫ್ ಅವರು ನವೆಂಬರ್ 1ರಂದು ತಮ್ಮ ಉನ್ನತ ಅಧಿಕಾರಿಗಳ ನಿಯೋಗದೊಂದಿಗೆ ಬೀಜಿಂಗ್‌ಗೆ ಭೇಟಿ ನೀಡಲಿದ್ದಾರೆ, ಅಲ್ಲಿ ನಡೆಯುವ ಜಂಟಿ ಸಮನ್ವಯ ಸಮಿತಿ (ಜೆಸಿಸಿ) ಸಭೆಯಲ್ಲಿ ಯೋಜನೆಗೆ ಸಹಿ ಹಾಕಲಾಗುತ್ತದೆ. ಕಳೆದ ವಾರ ಚೀನಾದ ಅಧ್ಯಕ್ಷನಾಗಿ ಮೂರನೇ ಅವಧಿಗೆ ಚುನಾಯಿತರಾದ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗುತ್ತಿರುವ ಮೊದಲ ವಿದೇಶಿ ನಾಯಕ ಆಗಲಿದ್ದಾರೆ ಷರೀಫ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!