ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಅಫಘಾನಿಸ್ತಾನವನ್ನು ತಾಲಿಬಾನ್ ತೆಕ್ಕೆಗೆ ತೆಗೆದುಕೊಂಡ ನಂತರ ಮೊದಲ ಬಾರಿಗೆ ಕಾಬೂಲ್ ಏರ್ಪೋರ್ಟ್ಗೆ ವಿದೇಶಿ ವಾಣಿಜ್ಯ ವಿಮಾನವೊಂದು ಬಂದಿಳಿದಿದೆ.
ಹೌದು.. ಪಾಕಿಸ್ತಾನದ ಅಂತಾರಾಷ್ಟ್ರೀಯ ವಿಮಾನವು ಸೋಮವಾರ ಕೆಲವೇ ಮಂದಿ ಪ್ರಯಾಣಿಕರೊಂದಿಗೆ ಕಾಬೂಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಆಗಸ್ಟ್ 15ರ ಬಳಿಕ ಕಾಬೂಲ್ಗೆ ಬಂದಿಳಿದ ಮೊದಲ ವಿದೇಶಿ ವಾಣಿಜ್ಯ ವಿಮಾನ ಇದಾಗಿದೆ.
‘ವಿಮಾನದಲ್ಲಿ ಸುಮಾರು 10 ಪ್ರಯಾಣಿಕರಿದ್ದರು. ಅವರಲ್ಲಿ ಹೆಚ್ಚಿನವರು ಪ್ರಯಾಣಿಕರ ಬದಲು ವಿಮಾನದ ಸಿಬ್ಬಂದಿ ಆಗಿರುವ ಸಾಧ್ಯತೆ ಇದೆ ಎಂದು ಎಎಫ್ಪಿ ಪತ್ರಕರ್ತರೊಬ್ಬರು’ ಹೇಳಿದ್ದಾರೆ.