ಪಾಕಿಸ್ತಾನದ ಕರಾಚಿಯಲ್ಲಿ ಹಾಲಿನ ದರ ಪ್ರತಿ ಲೀಟರ್‌ ಗೆ 210 ರೂ : ಗಗನಕ್ಕೇರಿದ ಆಹಾರ ಪದಾರ್ಥದ ಬೆಲೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪಾಕಿಸ್ತಾನದಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟಿನಿಂದಾಗಿ ಪದಾರ್ಥಗಳ ಬೆಲೆ ಏರಿಕೆಯು ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇದರ ಪರಿಣಾಮವಾಗಿ ಸಾಮಾನ್ಯ ಜನರಿಗೆ ದೊಡ್ಡ ಪೆಟ್ಟು ಬಿದ್ದಿದೆ.

ಇತ್ತೀಚೆಗೆ ಹಾಲಿನ ಬೆಲೆಯು ಪ್ರತಿ ಲೀಟರ್‌ಗೆ 200ರೂ ಆಗಿತ್ತು, ಆದರೆ ಈಗ ಒಂದು ಲೀಟರ್‌ ಹಾಲಿನ ಬೆಲೆಯನ್ನು 210 ರೂ.ಗೆ ಮತ್ತು ಚಿಕನ್ ಬೆಲೆಯನ್ನು ಕೆಜಿಗೆ 30 ರಿಂದ 40 ರೂಗಳಷ್ಟು ಏರಿಕೆ ಮಾಡಲಾಗಿದೆ, ಅಂದರೆ ಪ್ರತಿ ಕೆ.ಜಿ ಗೆ 480-500 ರೂಗಳಷ್ಟು ತಲುಪಿದೆ.

ಈ ತಿಂಗಳ ಆರಂಭದಲ್ಲಿ, ಜೀವಂತ ಹಕ್ಕಿ ಪ್ರತಿ ಕೆಜಿಗೆ 390 ರಿಂದ 440 ರೂ.ಗೆ ಲಭ್ಯವಿತ್ತು, ಆದರೆ 2023ರ ಜನವರಿ ಕೊನೆಯ ವಾರದಲ್ಲಿ ಕೆಜಿ ಗೆ 380 ರಿಂದ 420 ರೂ ನಡುವೆ ಮಾರಾಟವಾಗುತ್ತಿದೆ. ಕೆಲ ದಿನಗಳ ಹಿಂದೆ ಕೆಜಿಗೆ 620 ರಿಂದ 650 ರೂಪಾಯಿ ಇದ್ದ ಕೋಳಿ ಮಾಂಸ ಈಗ 700 ರಿಂದ 780 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ವರದಿಯಾಗಿದೆ.

ಮೂಳೆಗಳಿಲ್ಲದ ಮಾಂಸದ ಬೆಲೆ ಕೆಜಿಗೆ 1,000 ರಿಂದ 1,100 ರೂ.ಗಳ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ.

ಕರಾಚಿ ಹಾಲು ಚಿಲ್ಲರೆ ವ್ಯಾಪಾರಿಗಳ ಸಂಘದ ಮಾಧ್ಯಮ ಸಂಯೋಜಕ ವಹೀದ್ ಗಡ್ಡಿ “1,000 ಕ್ಕೂ ಹೆಚ್ಚು ಅಂಗಡಿಯವರು ಹಾಲನ್ನು ಹೆಚ್ಚಳ ಮಾಡಿರುವ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇವುಗಳು ವಾಸ್ತವವಾಗಿ ಸಗಟು ವ್ಯಾಪಾರಿಗಳು/ಹೈನುಗಾರರ ಅಂಗಡಿಗಳು ಮತ್ತು ನಮ್ಮ ಸದಸ್ಯರಲ್ಲ.” ಎಂದು ಹೇಳಿದ್ದಾರೆ.

“ನಮ್ಮ 4,000 ಚಿಲ್ಲರೆ ಸದಸ್ಯರು ಲೀಟರ್‌ಗೆ 190 ರೂ.ಗೆ ಮಾರಾಟ ಮಾಡುತ್ತಿದ್ದು, ಅದರಲ್ಲಿ ಯಾವುದೇ ಬದಲಾವಣೆಯಿಲ್ಲದೆ.” ಎಂದು ಅವರು ತಿಳಿಸಿದ್ದಾರೆ.

ಒಂದು ವೇಳೆ ಹೈನುಗಾರರು ಮತ್ತು ಸಗಟು ವ್ಯಾಪಾರಿಗಳು ಘೋಷಿಸಿದ ಬೆಲೆ ಏರಿಕೆಯನ್ನು ಹಿಂತಿರುಗಿಸದಿದ್ದಲ್ಲಿ, ಖರೀದಿ ಬೆಲೆಯಲ್ಲಿ 27 ರೂಪಾಯಿ ಏರಿಕೆಯಾದ ನಂತರ ಹೊಸ ದರದ ಲೆಕ್ಕಾಚಾರದ ಪ್ರಕಾರ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಂದ 210 ರೂಪಾಯಿಗಳ ಬದಲಿಗೆ 220 ರೂಪಾಯಿಗಳನ್ನು ವಿಧಿಸುತ್ತಾರೆ ಎಂದು ಅವರು ಹೇಳಿದರು.

ಡಿಸೆಂಬರ್ 16, 2022 ರಂದು ಚಿಲ್ಲರೆ ವ್ಯಾಪಾರಿಗಳು ಪ್ರತಿ ಲೀಟರ್‌ಗೆ ಹಾಲನ್ನು 180 ರೂ.ಗೆ ಮಾರಾಟ ಮಾಡಲು ಕರಾಚಿಯ ಕಮಿಷನರ್‌ನಿಂದ ಲೀಟರ್‌ಗೆ 10 ರೂ ಹೆಚ್ಚಳಕ್ಕೆ ಅನುಮತಿ ಪಡೆದರು. ಆದರೆ ಹೆಚ್ಚಿನ ಚಿಲ್ಲರೆ ವ್ಯಾಪಾರಿಗಳು ಅಧಿಕೃತ ದರವನ್ನು ತಿರಸ್ಕರಿಸಿ ಪ್ರತಿ ಲೀಟರ್‌ಗೆ 190 ರೂ.ಗೆ ಹಾಲನ್ನು ಮಾರಾಟ ಮಾಡುವುದನ್ನು ಮುಂದುವರೆಸಿದರು. ಆಗ ಅಧಿಕೃತ ಸಗಟು ದರವನ್ನೂ ಲೀಟರ್‌ಗೆ 160 ರೂ.ನಿಂದ 170 ರೂ.ಗೆ ಹೆಚ್ಚಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!