Monday, August 8, 2022

Latest Posts

ಪಾಕಿಸ್ತಾನದ ನಿಯಂತ್ರಣಕ್ಕೆ ಬರಲಿದೆ ಅಫ್ಘನ್ ಅರ್ಥವ್ಯವಸ್ಥೆ: ಹೇಗೆ ಗೊತ್ತಾ?

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಫಘಾನಿಸ್ತಾನದ ಪ್ರಸ್ತುತ ಸರ್ಕಾರವನ್ನು ಹೆಚ್ಚು-ಕಡಿಮೆ ರಚಿಸಿರುವುದು ಪಾಕಿಸ್ತಾನದ ಗುಪ್ತಚರ ದಳವೇ. ಅಫಘನ್ ಮಿಲಿಟರಿ ಹಾಗೂ ಬೇಹುಗಾರಿಕೆ ಮೇಲೆ ಅದಾಗಲೇ ಹಿಡಿತ ಸಾಧಿಸಿರುವ ಪಾಕಿಸ್ತಾನ ಇದೀಗ ಅರ್ಥವ್ಯವಸ್ಥೆಯನ್ನೂ ತನ್ನದೇ ತೆಕ್ಕೆಗೆ ತೆಗೆದುಕೊಳ್ಳಲು ಹೊರಟಿದೆ.

ಪಾಕಿಸ್ತಾನದ ವಿತ್ತಮಂತ್ರಿ ಶೌಕತ್ ತರೇನ್ ಘೋಷಿಸಿರುವ ಪ್ರಕಾರ ಪಾಕಿಸ್ತಾನವು ಅಫಘಾನಿಸ್ತಾನದೊಡನೆ ಡಾಲರ್ ಬದಲಾಗಿ ತನ್ನ ಕರೆನ್ಸಿಯಲ್ಲೇ ವ್ಯವಹಾರ ಮಾಡಲಿದೆ.

ಇದರ ಹಿಂದಿರುವ ಆಲೋಚನೆ ಏನು? ಅಫಘಾನಿಸ್ತಾನದ ಬಳಿ ಈಗ ಡಾಲರ್ ವಿನಿಮಯವಿಲ್ಲ. ಏಕೆಂದರೆ ಡಾಲರ್ ಲೆಕ್ಕದಲ್ಲಿ ಹಿಂದಿನ ಸರ್ಕಾರ ಕೂಡಿಟ್ಟಿದ್ದ ಹಣವನ್ನೆಲ್ಲ ಅಮೆರಿಕದ ಬ್ಯಾಂಕುಗಳು ಈಗಿನವರಿಗೆ ಬಳಕೆಗೆ ಬರದಂತೆ ತಡೆದಿಟ್ಟಿವೆ. ಈಗ ಅಫಘಾನಿಸ್ತಾನದ ಉಗ್ರ ಪ್ರಮುಖರು ಮಾದಕ ವಸ್ತು ಸೇರಿದಂತೆ ಏನೇ ವ್ಯಾಪಾರಗಳನ್ನು ಮಾಡುವುದಕ್ಕೆ ಪಾಕಿಸ್ತಾನವೇ ಪ್ರಮುಖ ರಾಷ್ಟ್ರ. ಪಾಕಿಸ್ತಾನ ಈ ವಹಿವಾಟುಗಳನ್ನೆಲ್ಲ ತನ್ನದೇ ಕರೆನ್ಸಿ ಉಪಯೋಗಿಸಿ ಮಾಡುವುದರ ಮೂಲಕ ಅಫಘಾನಿಸ್ತಾನದವರು ಏನೇ ಮಾರುವುದಿದ್ದರೂ ಪಾಕಿಸ್ತಾನವೇ ಸಹಜ ಗ್ರಾಹಕ ಎಂಬಂತೆ ಆಗಲಿದೆ. ಏಕೆಂದರೆ, ಅಫ್ಘನ್ನರ ಬಳಿ ವಿನಿಮಯಕ್ಕೆ ಡಾಲರ್ ಇಲ್ಲ. 

ಈ ಹಿಂದೆ ಡಾಲರಿನಲ್ಲಿ ವ್ಯವಹರಿಸುತ್ತಿದ್ದಾಗ ಪಾಕಿಸ್ತಾನದೆದರು ಅಫಘಾನಿಸ್ತಾನದ ಕರೆನ್ಸಿಯೇ ಬಲವಾಗಿತ್ತು. ಈಗ ಆ ಸಮೀಕರಣ ಬದಲಾಗಿ ಪಾಕಿಸ್ತಾನವೇ ಅಫಘಾನಿಸ್ತಾನದ ಎಲ್ಲ ವ್ಯಾಪಾರ ವಹಿವಾಟನ್ನು ನಿಯಂತ್ರಿಸುವಂತಾಗುತ್ತದೆ. 

ಅಫಘಾನಿಸ್ತಾನದ ನಾನಾ ವ್ಯವಹಾರಗಳನ್ನು ನಿಭಾಯಿಸುವುದಕ್ಕೆ ಪಾಕಿಸ್ತಾನದಿಂದಲೇ ಜನರನ್ನು ಕಳುಹಿಸಲಾಗುತ್ತದೆ ಎಂದೂ ಪಾಕ್ ವಿತ್ತಮಂತ್ರಿ ಬಹಿರಂಗವಾಗಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss