Wednesday, August 10, 2022

Latest Posts

T20 World Cup | ಪಾಕಿಸ್ತಾನ-ನ್ಯೂಜಿಲ್ಯಾಂಡ್ ತಂಡ ಮುಖಾಮುಖಿ: ಟಾಸ್​​ ಗೆದ್ದ ಬಾಬರ್ ಬೌಲಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಟಿ-20 ವಿಶ್ವಕಪ್​​ನಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್ ತಂಡ ಮುಖಾಮುಖಿಯಾಗಲಿವೆ. ಇದೀಗ ಟಾಸ್​​ ಗೆದ್ದ ಪಾಕಿಸ್ತಾನ ತಂಡ ಬೌಲಿಂಗ್ ಆಯ್ದುಕೊಂಡಿದೆ.
ಉಭಯ ತಂಡಗಳಿಗೆ ಪ್ರತಿಷ್ಠೆಯ ಪಂದ್ಯವಾಗಿ ಮಾರ್ಪಟ್ಟಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಜಯಗಳಿಸಿರುವ ಪಾಕಿಸ್ತಾನ ತಂಡ ಈ ಪಂದ್ಯವನ್ನೂ ಗೆಲ್ಲುವ ತವಕದಲ್ಲಿದೆ. ಇನ್ನೊಂದೆಡೆ ಕೇನ್​ ವಿಲಿಯಮ್ಸ​ನ್ ಪಡೆ ಟೂರ್ನಿಯಲ್ಲಿ ಪಾಕ್ ವಿರುದ್ಧ ಗೆದ್ದು, ಪ್ರಶಸ್ತಿ ಗೆಲ್ಲುವ ತಂಡಗಳ ಸಾಲಿನ ಬಲಿಷ್ಟ ತಂಡ ಎಂಬ ಸಂದೇಶ ರವಾನಿಸಲು ಸಿದ್ಧವಾಗಿದೆ.
ಪಾಕಿಸ್ತಾನ ತಂಡ: ಬಾಬರ್ ಆಜಂ(ಕ್ಯಾಪ್ಟನ್​), ಮೊಹಮ್ಮದ್ ರಿಜ್ವಾನ್​(ವಿ.ಕೀ), ಫಖಾರ್ ಜಮಾನ್​, ಮೊಹಮ್ಮದ್ ಹಫೀಜ್​, ಶೋಯಬ್ ಮಲಿಕ್​, ಆಸೋಪ್ ಅಲಿ, ಇಮಾದ್ ವಾಸೀಂ, ಶಾಬ್ದಾದ್​ ಖಾನ್​, ಹಸನ್​ ಅಲಿ, ಹರೀಸ್​ ರೌಫ್​, ಶಾಹಿನ್​ ಆಫ್ರಿದಿ
ನ್ಯೂಜಿಲ್ಯಾಂಡ್ ತಂಡ: ಮಾರ್ಟಿನ್​ ಗಫ್ಟಿಲ್,ಥಿಮ್​ ಸಿಫರ್ಟ್​(ವಿ.ಕೀ), ಕೇನ್​ ವಿಲಿಯಮ್ಸನ್​(ಕ್ಯಾಪ್ಟನ್​), ಡಿವೊನ್​ ಕಾನ್ವೆ, ಗ್ಲೇನ್​​ ಪಿಲಿಪ್ಸ್​, ನಿಶಮ್​,ಮಿಚೆನ್​ ಸ್ನಾಚರ್​, ಡರ್ಲೆ ಮಿಚೆಲ್​, ಫಾರ್ಗೂಸನ್​​, ಇಶ್​​ ಸೋಧಿ, ಬೌಲ್ಟ್​​

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss