Wednesday, August 17, 2022

Latest Posts

ನಿಷೇಧಿತ ಇಸ್ಲಾಮಿಕ್ ಸಂಘಟನೆಯ 350 ಸದಸ್ಯರನ್ನು ಬಿಡುಗಡೆ ಮಾಡಿದ ಪಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಸರ್ಕಾರ ನಿಷೇಧಿತ ತಹ್ರೀಕ್ –ಎ- ಲಬ್ಬಾಯಿಕ್ ಪಾಕಿಸ್ತಾನ (ಟಿಎಲ್’ಪಿ) ಸಂಘಟನೆಯ 350 ಸದಸ್ಯರನ್ನು ಬಿಡುಗಡೆ ಮಾಡಿದೆ ಎಂದು ಪಾಕಿಸ್ತಾನದ ಗೃಹ ಸಚಿವ ಶೇಖ್ ರಶೀದ್ ಘೋಷಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಟಿಎಲ್’ಪಿ ಸಂಘಟನೆಯ ನಾಯಕ ಸಾದ್ ಹುಸೇನ್ ರಿಜ್ವಿ ನನ್ನು ಬಿಡುಗಡೆ ಮಾಡದ ಹಿನ್ನೆಲೆ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಟಿಎಲ್ ಪಿಯ ಇತರ ಸದಸ್ಯರು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಟಿಎಲ್ ಪಿ ಇಸ್ಲಾಮಾಬಾದ್ ನಲ್ಲಿ ಪ್ರತಿಭಟನಾ ಪಥ ಸಂಚಲನ ನಡೆಸಲು ತೀರ್ಮಾನಿಸಿದ್ದು,ಈ ಪ್ರತಿಭಟನೆ ತಪ್ಪಿಸಲು ಪಾಕ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.
ಕಳೆದ ವಾರ ವಿಪಕ್ಷಗಳು ಹಾಗೂ ನಿಷೇಧಿತ ಸಂಘಟನೆಗಳು ನಡೆಸಿದ ಪ್ರತಿಭಟನೆಯಿಂದ ಇಸ್ಲಾಮಾಬಾದ್, ಲಾಹೋರ್ ಮತ್ತು ರಾವಲ್ಪಿಂಡಿ ಭಾಗಶಃ ಸ್ಥಗಿತಗೊಂಡಿತ್ತು. ಈ ಘರ್ಷಣೆಯಲ್ಲಿ ಮೂವರು ಪೊಲೀಸರು ಹಾಗೂ 7 ಟಿಎಲ್ ಪಿ ಸದಸ್ಯರು ಮೃತಪಟ್ಟಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!