ಆಪರೇಷನ್‌ ಕ್ಲೀನ್‌ ಅಪ್‌: 20 ಬಲೂಚ್‌ ಹೋರಾಟಗಾರರು, 9 ಪಾಕ್‌ ಸೈನಿಕರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಹಾಗೂ ಬಲೂಚಿಸ್ತಾನದ ನಡುವಿನ ಸಂಘರ್ಷದಲ್ಲಿ 20 ಬಲೂಚ್ ಹೋರಾಟಗಾರರು, ಪಾಕಿಸ್ತಾನ ಹೊಡೆದುರುಳಿಸಿರುವುದಾಗಿ ಸೇನೆ ತಿಳಿಸಿದೆ.
ಬಲೂಚ್ ಲಿಬರೇಷನ್ ಆರ್ಮಿಯವರನ್ನು ಹೊಡೆದುರುಳಿಸಲು ಪಾಕ್ ಸೇನೆ ಆಪರೇಷನ್ ಕ್ಲೀನ್ ಅಪ್ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿತು.
ಈ ವೇಳೆ ಪಾಕ್ ನ ಸೇನಾ ಶಿಬಿರಗಳ ಮೇಲೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಮಾಡಿದ ದಾಳಿಯಲ್ಲಿ 9 ಪಾಕ್ ಸೈನಿಕರು, 20 ಬಲೂಚ್ ಹೋರಾಟಗಾರರು ಮೃತಪಟ್ಟಿದ್ದಾರೆ.
ಫೆ.2ರಂದು ಪಾಕಿಸ್ತಾನದ ನೃಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಹೋರಾಟಗಾರರು ಪಂಜ್ಗುರ್ ಹಾಗೂ ನೌಶ್ಕಿ ಪ್ರದೇಶಗಳ ಮೇಲೆ ದಾಳಿ ನಡೆಸಿದ್ದು, ಈ ದಾಳಿಯ ಹೊಣೆಗಾರಿಕೆಯನ್ನು ಬಲೂಚಿಸ್ತಾನ್ ನ್ಯಾಷ್ನಲಿಸ್ಟ್ ಆರ್ಮಿ ಹೊತ್ತುಕೊಂಡಿತ್ತು.
ಎರಡು ದಿನಗಳ ಸುದೀರ್ಘ ಹೋರಾಟದ ನಂತರ ಎಲ್ಲಾ ಹೋರಾಟಗಾರರು ಶರಣಾಗಲು ಸಮ್ಮತಿಸದಿದ್ದಾಗ ಅವರನ್ನು ಹೊಡೆದುರುಳಿಸಲಾಗಿದೆ ಎಂದು ಪಾಕ್ ಸೇನೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!