ಸ್ವಂತದವರನ್ನೇ ಪರಕೀಯರನ್ನಾಗಿಸಿದ ಪಾಕ್ ಸಚಿವರ ಹೇಳಿಕೆ: ಪಿಒಕೆ ಬೀದಿಗಳಲ್ಲಿ ಆಕ್ರೋಶದ ಅಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಈಗಾಗಲೇ ಜನರ ಅಸಮಾಧಾನ ಹೆಚ್ಚುತ್ತಿರುವ ನಡುವೆಯೇ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ. ಅವರ ಮಾತುಗಳು ಪಿಒಕೆ ಪ್ರದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿವೆ. ವಿವಾದಕ್ಕೆ ಕಾರಣವಾದ ಹೇಳಿಕೆ ರಾವಲಕೋಟ್ ಮತ್ತು ಮಿರ್ಪುರ ಪ್ರದೇಶದ ನಿವಾಸಿಗಳು ಸಾಂಪ್ರದಾಯಿಕ ಕಾಶ್ಮೀರಿ ಭಾಷೆಯನ್ನು ಮಾತನಾಡುವುದಿಲ್ಲ ಎಂಬ ಕಾರಣದಿಂದ ಅವರನ್ನು “ನಿಜವಾದ ಕಾಶ್ಮೀರಿಗಳು” ಎಂದು ಪರಿಗಣಿಸಲಾಗುವುದಿಲ್ಲ ಎಂದು ಖವಾಜಾ ಆಸಿಫ್ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲಿನ ಜನರು … Continue reading ಸ್ವಂತದವರನ್ನೇ ಪರಕೀಯರನ್ನಾಗಿಸಿದ ಪಾಕ್ ಸಚಿವರ ಹೇಳಿಕೆ: ಪಿಒಕೆ ಬೀದಿಗಳಲ್ಲಿ ಆಕ್ರೋಶದ ಅಲೆ