ಪಾಕ್ ಜನರಿಗೂ ಪ್ರಧಾನಿ ಮೋದಿ ಅಂದರೆ ಇಷ್ಟ: ಗಾಯಕ ಅನೂಪ್ ಜಲೋಟಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಾಕಿಸ್ತಾನದ ಜನ ಕೂಡ ಪ್ರಧಾನಿ ಮೋದಿ ಅವರನ್ನು ಭಾರೀ ಇಷ್ಟ ಪಡುತ್ತಾರೆ ಎಂದು ಗಾಯಕ ಅನೂಪ್ ಜಲೋಟಾ (Anup Jalota) ಅವರು ಶ್ಲಾಘಿಸಿದ್ದಾರೆ.

ಆಸ್ಟ್ರೇಲಿಯಾದ ಸಿಡ್ನಿಯ ಕ್ಯುಡೋಸ್ ಬ್ಯಾಂಕ್ ಅರೆನಾದಲ್ಲಿ ಮಾತನಾಡಿದ ಗಾಯಕ, ನೆರೆಯ ದೇಶದಲ್ಲಿ ಅವರಂತಹ ನಾಯಕನನ್ನು ಬಯಸುತ್ತೇವೆ ಎಂದು ಪಾಕಿಸ್ತಾನ (Pakistan) ದ ಜನ ಹೇಳುತ್ತಾರೆ ಎಂದರು.

ಜನರು ಪ್ರಧಾನಿ ಮೋದಿಯನ್ನು ಪ್ರೀತಿಸುತ್ತಾರೆ. ಒಟ್ಟಿನಲ್ಲಿ ಪಾಕಿಸ್ತಾನವೇ ಮೋದಿಯವರನ್ನು ಪ್ರೀತಿಸುತ್ತಿದೆ ಅಂತಾನೇ ಹೇಳಬಹುದು. ಮೋದಿಯಂತಹ ನಾಯಕ ನಮಗೆ ಬೇಕು ಎಂದು ಅಲ್ಲಿನ ಜನ ಹೇಳುತ್ತಿದ್ದಾರೆ. ಇತ್ತ ಸಿಡ್ನಿಯ ಜನ ಕೂಡ ಮೋದಿಯವರು ಶಾಶ್ವತವಾಗಿ ಪ್ರಧಾನಿಯಾಗಿರುವಂತೆ ಬಯಸುತ್ತಾರೆ ಎಂದು ಹೇಳಿದರು.

ಮೂರು ದಿನದ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಆಸ್ಟ್ರೇಲಿಯಾಗೆ ಆಗಮಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!