ಪಾತಾಳಕ್ಕೆ ತಲುಪಿದೆ ಪಾಕಿಸ್ತಾನಿ ರೂಪಾಯಿ: ಒಂದು ಡಾಲರ್‌ ಬೆಲೆ 262.6 ರೂ.

ಹೊಸದಿಗಂತ ಡಿಜಿಲ್‌ ಡೆಸ್ಕ್:‌
ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನದ ಕರೆನ್ಸಿ ಇಂಟರ್‌ಬ್ಯಾಂಕ್ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಶುಕ್ರವಾರದಂದು US ಡಾಲರ್‌ನ ವಿರುದ್ಧ ತನ್ನ ಕನಿಷ್ಠ ಮಟ್ಟಕ್ಕೆ ಕುಸಿದು 262.6 ಪಾಕಿಸ್ತಾನಿ ರೂಪಾಯಿಗೆ ತಲುಪಿದೆ.

ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಪ್ರಕಾರ, ಶುಕ್ರವಾರದಂದು ಮಾರುಕಟ್ಟೆಯು ಪ್ರಾರಂಭವಾದಾಗ, ಕರೆನ್ಸಿಯು ಗುರುವಾರದ ಅಂತ್ಯದಿಂದ 7.17 ರೂ. ಅಥವಾ 2.73 ಶೇಕಡಾದಷ್ಟು ಕುಸಿದಿದೆ.

1999 ರಲ್ಲಿ ಹೊಸ ವಿನಿಮಯ ದರ ವ್ಯವಸ್ಥೆಯನ್ನು ಪರಿಚಯಿಸಿದ ನಂತರ ಇದು ಅತ್ಯಂತ ದೊಡ್ಡ ಕುಸಿತವಾಗಿದೆ. ಇಂಟರ್‌ಬ್ಯಾಂಕ್‌ ವಹಿವಾಟಿನಲ್ಲಿ ಗುರುವಾರದಿಂದ ಪಾಕಿಸ್ತಾನಿ ರೂಪಾಯಿಯ ಮೌಲ್ಯವು 34 ರೂಪಾಯಿಯಷ್ಟು ಅಪಮೌಲ್ಯಗೊಂಡಿದೆ.

ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಸಾಲ ಕಾರ್ಯಕ್ರಮವನ್ನು ಪುನರುಜ್ಜೀವನಗೊಳಿಸಲು USD-PKR(ಪಾಕಿಸ್ತಾನಿ ರೂಪಾಯಿ) ವಿನಿಮಯ ದರದ ಮೇಲಿನ ಅನಧಿಕೃತ ಮಿತಿಯನ್ನು ಪಾಕಿಸ್ತಾನ ಸರ್ಕಾರ ತೆಗೆದುಹಾಕಿದ ನಂತರ ಪಾಕಿಸ್ತಾನಿ ರೂಪಾಯಿ ತೀವ್ರವಾಗಿ ಕುಸಿದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!