ಕುಲಭೂಷಣ್ ಜಾಧವ್ ಬಂಧಿಸಲು ಸಹಕರಿಸಿದ್ದ ಪಾಕ್‌ ಉಗ್ರ ಗುಂಡೇಟಿಗೆ ಬಲಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್ ಅವರನ್ನು ಇರಾನ್‌ನಿಂದ ಅಪಹರಿಸಲು ಪಾಕಿಸ್ತಾನಿ ಗುಪ್ತಚರ ಸಂಸ್ಥೆ (ಐಎಸ್‌ಐ)ಗೆ ಸಹಾಯ ಮಾಡಿದ್ದ ಮುಫ್ತಿ ಶಾ ಮಿರ್ ಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಮುಫ್ತಿ ಶಾ ಮಿರ್‌ನನ್ನು ( Mufti Shah Mir Shootout) ಬಲೂಚಿಸ್ತಾನದ ಟರ್ಬತ್‌ನಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ.

ಮುಫ್ತಿ ಶಾ ಮಿರ್ ಬಲೂಚಿಸ್ತಾನದ ಪ್ರಮುಖ ಧಾರ್ಮಿಕ ಮುಖಂಡನಾಗಿದ್ದು, ಆತನ ಹತ್ಯೆಗೆ ಎರಡು ಬಾರಿ ಪ್ರಯತ್ನಿಸಲಾಗಿತ್ತು . ಮುಫ್ತಿ ಶಾ ಮಿರ್ ರಾತ್ರಿಯ ಪ್ರಾರ್ಥನೆ ಮುಗಿಸಿ ಟರ್ಬತ್‌ನಲ್ಲಿರುವ ಸ್ಥಳೀಯ ಮಸೀದಿಯಿಂದ ಹೊರಡುವಾಗ ಮೋಟಾರ್ ಸೈಕಲ್‌ಗಳಲ್ಲಿ ಬಂದೂಕುಧಾರಿಗಳು ಅವರ ಮೇಲೆ ಹೊಂಚು ಹಾಕಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ವಾಂಸನ ಸೋಗಿನಲ್ಲಿದ್ದ ಮುಫ್ತಿ ಶಾ ಮಿರ್ ಮಾನವ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಜತೆಗೆ ಇಸ್ಲಾಮಿಕ್ ಮೂಲಭೂತವಾದಿ ರಾಜಕೀಯ ಪಕ್ಷವಾದ ಜಮಿಯತ್ ಉಲೇಮಾ-ಇ-ಇಸ್ಲಾಂನ ಸದಸ್ಯನಾಗಿದ್ದ.

ಈತ ಐಎಸ್‌ಐ ನೇತೃತ್ವದ ಡೆತ್ ಸ್ಕ್ವಾಡ್‌ಗಳೊಂದಿಗೆ ಸಂಪರ್ಕ ಹೊಂದಿದ್ದ. ಬಲೂಚಿಸ್ತಾನದ ಹಲವಾರು ಯುವಕರ ಅಪಹರಣ ಮತ್ತು ವಿವಿಧ ಕಾನೂನುಬಾಹಿರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಬಲೂಚಿಸ್ತಾನದಲ್ಲಿ ಧಾರ್ಮಿಕ ಉಗ್ರವಾದವನ್ನು ಹರಡುವಲ್ಲಿಯೂ ಸಹ ತೊಡಗಿಸಿಕೊಂಡಿದ್ದ ಎಂದು ವರದಿಯಾಗಿದೆ.

2016ರ ಮಾರ್ಚ್‌ನಲ್ಲಿ ಜೈಶ್ ಅಲ್-ಅದ್ಲ್‌ನ ಮುಲ್ಲಾ ಒಮರ್ ಇರಾನಿ ನೇತೃತ್ವದ ಗುಂಪು ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್ ಅವರನ್ನು ಇರಾನ್-ಪಾಕಿಸ್ತಾನ ಗಡಿಯಿಂದ ಅಪಹರಿಸಿತ್ತು. ಮುಫ್ತಿ ಶಾ ಮಿರ್ ಸೇರಿದಂತೆ ಹಲವು ಮಧ್ಯವರ್ತಿಗಳ ಮೂಲಕ ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಲಾಗಿತ್ತು. ಇರಾನ್ ನಲ್ಲಿ ವ್ಯಾಪಾರ ನಡೆಸುತ್ತಿದ್ದ ಕುಲಭೂಷಣ್ ಜಾಧವ್ ಅವರನ್ನು ಅಪಹರಿಸಿ ಅವರನ್ನು ಬಂಧಿಸಲಾಗಿತ್ತು. 2017ರ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಜಾಧವ್ ಅವರಿಗೆ ಗೂಢಚರ್ಯೆ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಮರಣದಂಡನೆ ವಿಧಿಸಿತು. ಈ ತೀರ್ಪನ್ನು ಭಾರತ ಖಂಡಿಸಿತ್ತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!