ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಪಾಕಿಸ್ತಾನದಲ್ಲಿ ನ್ಯೂಸ್ ಚಾನಲ್ ನ ಪ್ಯಾನಲ್ ಡಿಬೇಟ್ನಲ್ಲಿ ಮಹಿಳಾ ನಾಯಕಿಯೊಬ್ಬರು ಪಾಕ್ ಸಂಸದನ ಕೆನ್ನೆಗೆ ಲೈವ್ನಲ್ಲೇ ಬಾರಿಸಿದ್ದು, ಇದೀಗ ಭಾರೀ ವಿಡಿಯೋ ವೈರಲ್ ಆಗಿದೆ.
ಪಾಕಿಸ್ತಾನದ ಎಕ್ಸ್ಪ್ರೆಸ್ ವಾಹಿನಿಯಲ್ಲಿ ಪ್ಯಾನಲ್ ಡಿಬೇಟ್ ನಡೆಯುತಿತ್ತು. ಅದರಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ ಪರವಾಗಿ ಪಕ್ಷದ ನಾಯಕಿ ಡಾ.ಫಿರ್ದೌಸ್ ಆಶಿಕ್ ಭಾಗವಹಿಸಿದ್ದರು. ಅವರ ಜತೆ ಪ್ರತಿಪಕ್ಷದ ಖಾದಿರ್ ಖಾನ್ ಮಂಡೋಖೈಲ್ ಕೂಡ ಇದ್ದರು. ಯಾವುದೋ ವಿಚಾರದಲ್ಲಿ ಇಬ್ಬರ ನಡುವಿನ ವಾದ ವಿವಾದ ತಾರಕಕ್ಕೇರಿದೆ. ಸಿಟ್ಟು ಹೆಚ್ಚಾದ ನಂತರ ತಾಳ್ಮೆ ಕಳೆದುಕೊಂಡ ಫಿರ್ದೌಸ್, ಸಂಸದನ ಕೆನ್ನೆಗೆ ಬಾರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ನಾಯಕಿ ಫಿರ್ದೌಸ್, ‘ಟಾಕ್ ಶೋ ಸಂದರ್ಭದಲ್ಲಿ ಪಿಪಿಪಿಯ ಖಾದಿರ್ ಮಂಡೋಖೆಲ್ ನನ್ನ ವಿರುದ್ಧ ಬೆದರಿಕೆ ಹಾಕಿದ್ದಾರೆ. ಅವರು ನನ್ನ ದಿವಂಗತ ತಂದೆಯನ್ನು ಮತ್ತು ನನ್ನನ್ನು ನಿಂದಿಸುವ ಭಾಷೆ ಬಳಸಿ ಅವಮಾನಿಸಿದ್ದಾರೆ. ನನ್ನ ರಕ್ಷಣೆಯಲ್ಲಿ ನಾನು ತೀವ್ರ ಕ್ರಮಗಳನ್ನು ತೆಗೆದುಕೊಳ್ಳಬೇಕಾಯಿತು. ಕಾನೂನು ತಂಡದೊಂದಿಗೆ ಸಮಾಲೋಚಿಸಿದ ನಂತರ ಖಾದಿರ್ ಮಂಡೋಖೆಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
Playful Punjabi Parliamentarians of Pakistan. Their exchange in Urdu spoken with a Punjabi accent adds to the charm. pic.twitter.com/UHHgIaKBZw
— Tarek Fatah (@TarekFatah) June 10, 2021