ಮಹಿಳಾ ವಿಶ್ವಕಪ್‌: ಪಾಕ್‌ ವಿರುದ್ಧ ಬಾಂಗ್ಲಾ ವನಿತೆಯರಿಗೆ ಐತಿಹಾಸಿಕ ಜಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ನ್ಯೂಜಿಲ್ಯಾಂಡ್‌ ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ನಲ್ಲಿ ಬಾಂಗ್ಲಾ ವನಿತೆಯರು ಪಾಕ್‌ ವಿರುದ್ಧ 9 ರನ್‌ ಗಳ ಜಯ ದಾಖಲಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಇದು ವಿಶ್ವಕಪ್‌ ನಲ್ಲಿ ಬಾಂಗ್ಲಾ ಮಹಿಳೆಯರಿಗೆ ಒಲಿದ ಮೊಟ್ಟ ಮೊದಲ ಗೆಲುವಾಗಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ಬಾಂಗ್ಲಾ ವನಿತೆಯರು ನಿಗದಿತ 50 ಓವರ್‌ ಗಳಲ್ಲಿ 234 ರನ್‌ ಕಲೆಹಾಕಿದರು. ಮಧ್ಯಮ ಕ್ರಮಾಂಕದ ಆಟಗಾರ್ತಿ ಫರ್ಗ್ಯೂನಾ ಹಕ್‌ ತಂಡದ 71, ನಿಗರ್‌ ಸುಲ್ತಾನ 46 , ಶರ್ಮಿನಾ ಅಕ್ತರ್‌ 44 ಕಲೆಹಾಕಿ ತಂಡ ಉತ್ತಮ ಮೊತ್ತ ತಲುಪುವಂತೆ ನೋಡಿಕೊಂಡರು.
ಗುರಿ ಬೆನ್ನಟ್ಟಿದ ಪಾಕ್‌ ವನಿತೆಯರು ಸಿದ್ರಾ ಅಮೀನ್‌ ಶತಕದ ಹೊರತಾಗಿಯೂ 50 ಓವರ್‌ ಗಳಲ್ಲಿ 225 ರನ್‌ ಗಳನ್ನಷ್ಟೇ ಕಲೆಹಾಕಿ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಬಾಂಗ್ಲಾ ಪಾಯಿಂಟ್‌ ಪಟ್ಟಿಯಲ್ಲಿ 6 ನೇ ಸ್ಥಾನಕ್ಕೇರಿದರೆ, ಪಾಕ್‌ ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಸೋತು ಪಂದ್ಯಾವಳಿಯಿಂದ ಬಹುತೇಕ ಹೊರಬಿದ್ದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!