ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾ ಮೇಲೆ ಇಸ್ರೇಲ್ ದಾಳಿ ಮುಂದುವರೆದಿದ್ದು, ಅಪಾಯಕಾರಿ ಬೆಳವಣಿಗೆಯನ್ನು ನಿಲ್ಲಿಸಲು ತಕ್ಷಣವೇ ಮಧ್ಯಸ್ಥಿಕೆ ವಹಿಸುವಂತೆ ಇಡೀ ಜಗತ್ತಿಗೆ ಪ್ಯಾಲೆಸ್ಟೈನ್ ಕರೆ ಕೊಟ್ಟಿದೆ.
ಗಾಜಾ ಮೇಲಿನ ಯುದ್ಧದಲ್ಲಿ ಇತ್ತೀಚಿನ ಬೆಳವಣಿಗೆಗಳಲ್ಲಿ ಇಂಟರ್ನೆಟ್ ಸೇವೆ ಕಡಿತ ಮತ್ತು ನಿರಂತರ ಶೆಲ್ ದಾಳಿಯನ್ನು ತಡೆಯುವುದು ಮತ್ತು ಈ ಯುದ್ಧವನ್ನು ನಿಲ್ಲಿಸಲು ತಕ್ಷಣವೇ ಮಧ್ಯಪ್ರವೇಶಿಸುವಂತೆ ಇಡೀ ಜಗತ್ತಿಗೆ ಕರೆ ನೀಡುತ್ತದೆ ಎಂದು ಪ್ಯಾಲೆಸ್ಟೈನಿಯನ್ ವಿದೇಶಾಂಗ ವ್ಯವಹಾರಗಳು ಮತ್ತು ವಲಸಿಗರ ಸಚಿವಾಲಯವು ಸಾಮಾಜಿಕ ಮಾಧ್ಯಮದ ಮೂಲಕ ಹೇಳಿದೆ.
ಗಾಜಾ ಮೇಲೆ ಇಸ್ರೇಲ್ ಸೇನೆ ವೈಮಾನಿಕ ದಾಳಿಯನ್ನು ಮುಂದುವರೆಸಿದೆ. ಗಾಜಾದ ಹಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಕಳೆದ ರಾತ್ರಿ ಗಾಜಾದಲ್ಲಿ ತನ್ನ ಚಟುವಟಿಕೆಯನ್ನು ಹೆಚ್ಚಿಸುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗಾರಿ ಹೇಳಿದ್ದಾರೆ ಎಂದು ಪ್ಯಾಲೆಸ್ಟೈನಿಯನ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇಸ್ರೇಲ್ ಸೇನೆಯು ತನ್ನ ಸೇನಾ ಕಾರ್ಯಾಚರಣೆಯನ್ನು ಮುಂದುವರಿಸುತ್ತಿದ್ದಂತೆ ಶುಕ್ರವಾರ ಇಸ್ರೇಲ್‌ನ ಗಡಿ ಪ್ರದೇಶದ ಗಾಜಾ ಭಾಗದಲ್ಲಿ ಭಾರೀ ಶೆಲ್ ದಾಳಿಗಳು ಕಂಡು ಬಂದಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.