ಜೆರುಸಲೇಂ: ಇಸ್ರೇಲ್‌- ಪ್ಯಾಲೆಸ್ತೇನ್ ದಾಳಿ-‌ ಪ್ರತಿದಾಳಿ: ಮೂವರು ಮೃತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವೆಸ್ಟ್‌ ಬ್ಯಾಂಕ್‌ ನಲ್ಲಿ ಇಸ್ರೇಲ್‌ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತರಾಗಿದ್ದಾರೆ. ಇಸ್ರೇಲ್‌ ದಾಳಿಗೆ ಪ್ರತಿಕಾರವಾಗಿ ಪೂರ್ವ ಜೆರುಸಲೇಂನಲ್ಲಿ ಇಸ್ರೇಲಿ ಸೇನಾ ಚೆಕ್‌ಪಾಯಿಂಟ್‌ನ ಮೇಲೆ ಪ್ಯಾಲೆಸ್ತೀನ್ ಶನಿವಾರ ರಾತ್ರಿ ಗುಂಡಿನ ದಾಳಿ ನಡೆಸಿದ್ದು, ಇಸ್ರೇಲಿ ಮಹಿಳಾ ಯೋಧ ಸಾವನ್ನಪ್ಪಿ ಮೂವರು ಗಾಯಗೊಂಡಿದ್ದಾರೆ.
ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಮಿಲಿಟರಿ ದಾಳಿಯ ಸಮಯದಲ್ಲಿ ಇಬ್ಬರು ಪ್ಯಾಲೇಸ್ತೇನಿಯನ್ನರು ಮೃತಪಟ್ಟು 11 ಜನರು ಗಾಯಗೊಂಡಿದ್ದರು. ಇಸ್ರೇಲಿ ದಾಳಿಯ 1 ಗಂಟೆಗಳಲ್ಲೇ ಪ್ಯಾಲೆಸ್ತೇನರ್‌ ನಿಂದ ಪ್ರತಿ ದಾಳಿ ನಡೆದಿದೆ.  ಇಸ್ರೇಲ್ ನಲ್ಲಿ ವಾರವಿಡೀ ಸುಕ್ಕೋಟ್ ರಜಾದಿನವನ್ನು ಆಚರಿಸಲು ಪ್ರಾರಂಭಿಸುವ 24 ಗಂಟೆಗಳ ಮೊದಲು ಪ್ಯಾಲೆಸ್ತೇನ್‌ ದಾಳಿ ನಡೆದಿದೆ. ಈ ಸಮಯದಲ್ಲಿ ಹತ್ತಾರು ಸಾವಿರ ಯಹೂದಿಗಳು ಪವಿತ್ರ ಜೆರೂಸಲೇಂ ನಗರಕ್ಕೆ ಭೇಟಿ ನೀಡುತ್ತಾರೆ.
ಪೂರ್ವ ಜೆರುಸಲೆಮ್‌ನ ಶುಫಾತ್ ನಿರಾಶ್ರಿತರ ಶಿಬಿರದ ಬಳಿಯ ಚೆಕ್‌ಪಾಯಿಂಟ್‌ನಲ್ಲಿ ಶನಿವಾರ ರಾತ್ರಿ ಗುಂಡಿನ ದಾಳಿ ನಡೆದಿದೆ. ದಾಳಿಕೋರ ಕಾರಿನಿಂದ ಇಳಿದು ಗುಂಡು ಹಾರಿಸಿದ್ದಾನೆ. 19 ವರ್ಷದ ಭದ್ರತಾ ಸಿಬ್ಬಂದಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನೆ ಭಾನುವಾರ ಮುಂಜಾನೆ ಹೇಳಿದೆ.  ಹಿಂದಿನ ಶನಿವಾರ, ಇಸ್ರೇಲಿ ಪಡೆಗಳು ಮತ್ತು ಸ್ಥಳೀಯ ಬಂದೂಕುಧಾರಿಗಳ ಘರ್ಷಣೆಯ ಸ್ಥಳವಾದ ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ದಾಳಿಯ ಸಮಯದಲ್ಲಿ ಇಸ್ರೇಲಿ ಮಿಲಿಟರಿ ಇಬ್ಬರು ಪ್ಯಾಲೆಸ್ಟೀನಿಯನ್ ಹದಿಹರೆಯದವರನ್ನು ಗುಂಡಿಕ್ಕಿ ಕೊಂದಿತು. ಈ ಶಿಬಿರವನ್ನು ಪ್ಯಾಲೇಸ್ಟಿನಿಯನ್ ಉಗ್ರಗಾಮಿಗಳ ಭದ್ರಕೋಟೆ ಎಂದು ಕರೆಯಲಾಗುತ್ತದೆ.
1967 ರ ಮಧ್ಯಪ್ರಾಚ್ಯ ಯುದ್ಧದಲ್ಲಿ ಇಸ್ರೇಲ್ ಪೂರ್ವ ಜೆರುಸಲೆಮ್ ಅನ್ನು ವಶಪಡಿಸಿಕೊಂಡಿತು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡದ ಕ್ರಮದಲ್ಲಿ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿತು. ಇದು ನಗರದ ಅತ್ಯಂತ ಪ್ರಮುಖ ಪವಿತ್ರ ಸ್ಥಳಗಳಿಗೆ ನೆಲೆಯಾಗಿರುವ ಪೂರ್ವ ಜೆರುಸಲೆಮ್ ಸೇರಿದಂತೆ ಇಡೀ ನಗರವನ್ನು ತನ್ನ ರಾಜಧಾನಿ ಎಂದು ಪರಿಗಣಿಸುತ್ತದೆ. ಪ್ಯಾಲೇಸ್ಟಿನಿಯನ್ನರು ಪೂರ್ವ ಜೆರುಸಲೆಮ್ ಅನ್ನು ತಮ್ಮ ಭವಿಷ್ಯದ ರಾಜ್ಯದ ರಾಜಧಾನಿ ಎಂದು ಹೇಳಿಕೊಳ್ಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!