ನಿತೀಶ್‌ಗೆ ಮತ್ತೊಮ್ಮೆ ಶಾಕ್: 15 ಜಿಲ್ಲಾ ಪಂಚಾಯತ್‌ ಸದಸ್ಯರು ಬಿಜೆಪಿ ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿತೀಶ್ ಕುಮಾರ್‌ಗೆ ಸರಣಿ ಶಾಕ್ ಉಂಟಾಗುತ್ತಿದೆ. ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡು ಆರ್​ಜೆಡಿ-ಕಾಂಗ್ರೆಸ್ ಜೊತೆ ಕೈ ಜೋಡಿಸಿರುವ ಬಿಹಾಋ ಸಿಎಂ ನಿತೀಶ್‌ಗೆ ಹೊಡೆತದ ಮೇಲೆ ಹೊಡೆತ ಬೀಳುತ್ತಿದೆ. ಇತ್ತೀಚೆಗಷ್ಟೇ ಅರುಣಾಚಲ ಮತ್ತು ಮಣಿಪುರದ ಜೆಡಿಯು ಶಾಸಕರು ನಿತೀಶ್‌ಗೆ ಗುಡ್‌ ಬೈ ಹೇಳಿ ಕಮನವನ್ನು ಹಿಡಿದರು. ಇದೀಗ ದಿಯು-ದಮನ್‌ ಸರದಿ ಈ ಪ್ರದೇಶದಲ್ಲಿ ಜೆಡಿಯುನ 17 ಪಂಚಾಯತ್ ಸದಸ್ಯರಲ್ಲಿ 15 ಮಂದಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಬಿಜೆಪಿ ಸೇರಿದ ನಂತರ ಮಾತನಾಡಿದ ಜೆಡಿಯು ನಾಯಕರು, ಬಿಜೆಪಿಯಿಂದ ಮೈತ್ರಿ ಮುರಿದು ಆರ್‌ಜೆಡಿ ಜೊತೆ ಕೈಜೋಡಿಸುವುದನ್ನು ನಾವು ವಿರೋಧಿಸುತ್ತೇವೆ. ಬಿಹಾರದಲ್ಲಿ ಅಭಿವೃದ್ಧಿಗೆ ಉತ್ತೇಜನ ನೀಡಿದ್ದ ಬಿಜೆಪಿ ತೊರೆದು, ಭ್ರಷ್ಟರಾಗಿರುವ ಕಾಂಗ್ರೆಸ್ ಹಾಗೂ ಆರ್​ಜೆಡಿ ಜೊತೆ ನಿತೀಶ್ ಕುಮಾರ್​ ಕೈಜೋಡಿಸಿದ್ದಾರೆ. ಅವರ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಹಾಗಾಗಿಯೇ ನಾವೆಲ್ಲರೂ ಜೆಡಿಯುಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದೇವೆ ಎಂದರು.

ಜೆಡಿಯು ಬಿಹಾರ ರಾಜ್ಯದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡು ಆರ್‌ಜೆಡಿ ಸೇರಿದ ನಂತರ, ಅರುಣಾಚಲ ಪ್ರದೇಶದಲ್ಲಿ ಜೆಡಿಯುನ ಏಳು ಶಾಸಕರು ಮಣಿಪುರದ ಆರು ಶಾಸಕರಲ್ಲಿ ಐವರು ಬಿಜೆಪಿ ಸೇರಿದರು. ಇದೀಗಗ ದಿಯು ದಾಮನ್ ಸರದಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!