Wednesday, August 17, 2022

Latest Posts

ಪಂಡಿತ್ ದೀನದಯಾಳರ ಸರಳ ಜೀವನ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಶಾಸಕ ನಾಗೇಂದ್ರ

ಹೊಸ ದಿಗಂತ ವರದಿ, ಮೈಸೂರು:

ಪಂಡಿತ್ ದೀನದಯಾಳು ಉಪಾಧ್ಯಾಯರ ಸರಳ ಜೀವನ, ಆದರ್ಶದ ಚಿಂತನೆಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್ ನಾಗೇಂದ್ರ ಹೇಳಿದರು.
ಪಂಡಿತ್ ದೀನದಯಾಳು ಉಪಾಧ್ಯಾಯರವರ ಜನ್ಮದಿನದ ಪ್ರಯುಕ್ತ ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಶನಿವಾರ ನಗರದ ಚಂದ್ರಮೌಳೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ವಿಶೇಷ ಚೇತನರಿಗೆ ವ್ಹೀಲ್ ಚೇರ್ ಗಳನ್ನು ವಿತರಿಸಿ ಮಾತನಾಡಿದ ಅವರು,
ಅಂತ್ಯೋದಯ, ಏಕಾತ್ಮ ಮಾನವತಾವಾದದ ಹರಿಕಾರರಾದ ಪಂಡಿತ್ ದೀನದಯಾಳು ಉಪಾಧ್ಯಾಯರು, ರಾಷ್ಟಿçಯ ಸ್ವಯಂಸೇವಕ ಸಂಘದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಭಾರತೀಯ ಜನಸಂಘದ ಹಿರಿಯ ನಾಯಕರಾಗಿ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಅವರ ಸರಳ ಜೀವನ ಮತ್ತು ಆದರ್ಶದ ಚಿಂತನೆಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸೋಮಶೇಖರ್ ರಾಜು, ರಾಜ್ಯ ಬಿಜೆಪಿ ವಕ್ತಾರ ಮಹೇಶ್, ಚಾಮರಾಜ ಕ್ಷೇತ್ರದ ದಿನೇಶ್ ಗೌಡ, ರಾಜ್ಯ ಬಿಜೆಪಿ ಅನ್ಯ ಭಾಷಾ ಪ್ರಕೋಷ್ಠದ ಸಂಚಾಲಕ ರಾಜೇಂದ್ರ , ನಗರ ಬಿಜೆಪಿ ಉಪಾಧ್ಯಕ್ಷ ಹರ್ಷ, ನಗರ ವ್ಯಾಪಾರ ಪ್ರಕೋಷ್ಠ ಸಹ ಸಂಚಾಲಕ ಪರಮೇಶ್ ಗೌಡ, ಚಾಮರಾಜ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್. ಆರ್, ಕ್ಷೇತ್ರದ ಫಲಾನುಭವಿಗಳ ಪ್ರಕೋಷ್ಠದ ಸಹ ಸಂಚಾಲಕ ವಿಘ್ನೇಶ್ವರ ಭಟ್, ಚಾಮರಾಜ ಕ್ಷೇತ್ರದ ಪ್ರಬುದ್ಧ ಪ್ರಕೋಷ್ಠದ ಸಹ ಸಂಚಾಲಕ ಸುರೇಂದ್ರ, ಚಾಮರಾಜ ಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಕ್ಷಿ÷್ಮ, ಕ್ಷೇತ್ರದ ಬಿಜೆಪಿ ಎಸ್.ಟಿ. ಮೋರ್ಚಾ ಉಪಾಧ್ಯಕ್ಷ ಆನಂದ್, ಶ್ರೀ ಕನ್ನಿಕಾಪರಮೇಶ್ವರಿ ಕೋ – ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಂದೀಪ್, ನಿರ್ದೇಶಕ ಗುಂಡು ವೆಂಕಟೇಶ್ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!