ಪಾನಿಪುರಿ ಕಿಟ್ಟಿ ಕಿರಿಕ್: ನಟ ದುನಿಯಾ ವಿಜಯ್ ಗೆ ನೊಟೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾನಿಪುರಿ ಕಿಟ್ಟಿ ಜೊತೆಗಿನ ಗಲಾಟೆಗೆ ಸಂಬಂಧಿಸಿ ನಟ ದುನಿಯಾ ವಿಜಯ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಹೈಗ್ರೌಂಡ್ ಪೊಲೀಸರಿಂದ ನೋಟಿಸ್ ನೀಡಿದೆ.

ಮೊನ್ನೆಯಷ್ಟೇ ಕಿಟ್ಟಿ ಮೇಲೆ ಎಫ್.ಐ.ಆರ್ ದಾಖಲಾಗಿತ್ತು. ಕಿಟ್ಟಿ ಪೊಲೀಸ್ ಅಧಿಕಾರಿಯ ಮುಂದೆ ಹಾಜರು ಕೂಡ ಆಗಿದ್ದರು.
ಇದೀಗ ಅದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರಿಂದ ನೋಟಿಸ್ ನೀಡಲಾಗಿದೆ.

ಪಾನಿಪುರಿ ಕಿಟ್ಟಿ ವಿರುದ್ಧ ದುನಿಯಾ ವಿಜಯ್ ದೂರು ನೀಡಿದ್ದರು. ದೂರುದಾರ ಆಗಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ.
2018ರಲ್ಲಿ ಕಿಟ್ಟಿ ಮತ್ತು ದುನಿಯಾ ವಿಜಯ್ ಆಪ್ತ ಸ್ನೇಹಿತರು ಪ್ರಕರಣವೊಂದರಲ್ಲಿ ಇಬ್ಬರೂ ಬಡಿದಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸ್ಪರ ಇಬ್ಬರೂ ದೂರು ದಾಖಲಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!