Monday, August 15, 2022

Latest Posts

ಪಂಜಶೇರ್ ಪಡೆಗಳಿಂದ ಪ್ರತಿರೋಧ: 600ಕ್ಕೂ ಹೆಚ್ಚು ತಾಲಿಬಾನಿಗಳು ಹತ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಅಫ್ಘಾನಿಸ್ತಾನದಲ್ಲಿ ಸರಕಾರ ರಚನೆ ಯತ್ನದಲ್ಲಿ ತಾಲಿಬಾನ್ ಪಾಕಿಸ್ತಾನ ಸೇರಿದಂತೆ ವಿವಿಧ ಬಾಹ್ಯ ಹಿತಾಸಕ್ತಿಗಳ ಹಿಡಿತಕ್ಕೆ ಸಿಲುಕಿ ಪೇಚಿಗೀಡಾಗಿರುವಂತೆಯೇ, ಅತ್ತ ಪಂಜಶೇರ್ ಕಣಿವೆಯಲ್ಲಿ ಸ್ಥಳೀಯ ಪ್ರತಿರೋಧ ಪಡೆ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ತಾಲಿಬಾನ್ ಪಡೆಗಳನ್ನು ಹಿಮ್ಮೆಟ್ಟಿಸಿದ್ದು, 600ಕ್ಕೂ ಹೆಚ್ಚು ತಾಲಿಬಾನಿಗಳು ಹತರಾಗಿ , 1000ಕ್ಕೂ ಅಧಿಕ ತಾಲಿಬಾನಿಗಳನ್ನು ಸೆರೆಹಿಡಿದಿರುವುದಾಗಿ ಫ್ರಂಟ್ ಹೇಳಿದೆ. ಆದರೆ ತಾಲಿಬಾನ್ ಮಾತ್ರ ಇದನ್ನು ಅಲ್ಲಗಳೆದು ನಾವು ಪಂಜಶೇರ್ ರಾಜಧಾನಿ ಬಜಾರಕ್ ತಲುಪಿರುವುದಾಗಿ ಹೇಳಿಕೊಂಡಿದೆ. ಕಪಿಸಾ ಪ್ರಾಂತ್ಯ ಗಡಿಯಿಂದಲೇ ತಾಲಿಬಾನಿಗಳನ್ನು ಹಿಮ್ಮೆಟ್ಟಿಸಿರುವುದಾಗಿ ಫ್ರಂಟ್ ಹೇಳಿದೆ.ಅಲ್ಲಿ ತಾಬಬಾನಿಗಳಿಗೆ ಭಾರೀ ಹಿನ್ನಡೆ ಮತ್ತು ವ್ಯಾಪಕ ಸಾವುನೋವು ಉಂಟಾಗಿರುವುದು ವರದಿಗಳಿಂದ ವ್ಯಕ್ತವಾಗಿದೆ.
ತಾಲಿಬಾನಿಗಳ ಆಕ್ರಮಣಕ್ಕೆ ಪಂಜ್‌ಶೇರ್ ಒಳಗಾಗಲು ಬಿಡುವುದಿಲ್ಲ ಎಂಬುದಾಗಿ ಫ್ರಂಟ್ ನಾಯಕ ಅಹಮ್ಮದ್ ಮಸೂದ್ ಪ್ರತಿಜ್ಞೆಗೈದಿದ್ದಾರೆ. ದೇವರು, ಸ್ವಾತಂತ್ರ್ಯ ಮತ್ತು ನ್ಯಾಯದ ಮೇಲೆ ನಂಬಿಕೆಯಿಟ್ಟು ತಾಲಿಬಾನ್ ಆಕ್ರಮಣವನ್ನು ಎದುರಿಸುತ್ತಿರುವುದಾಗಿ ಮಸೂದ್ ಹೇಳಿದ್ದಾರೆ. ಹಾಗೆಯೇ ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷನೆಂದು ಹೇಳಿಕೊಂಡಿರುವ ಅಮ್ರುಲ್ಲಾ ಸಾಲೇಹ್ , ಅಫ್ಘಾನಿಸ್ತಾನವನ್ನು ಅರ್ಧದಲ್ಲೇ ಕೈಕೊಟ್ಟು ಹೋದ ಅಮೆರಿಕದ ಅಧ್ಯಕ್ಷ ಜೊಯಿ ಬೈಡೆನ್ ಅವರನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದಾರೆ. ಅಫ್ಘಾನ್ ಸಂಕಟಕ್ಕೆ ಅಮೆರಿಕವೇ ಹೊಣೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲೇಹ್ ತಾಲಿಬಾನಿಗಳ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದೂ ಘೋಷಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss