ಬಾಂಗ್ಲಾ ವಿರುದ್ಧ ಅಬ್ಬರಿಸಿದ ಪಂತ್-ಅಯ್ಯರ್: 80 ರನ್‌ಗಳ ಮುನ್ನಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತ 2ನೇ ಟೆಸ್ಟ್‌ನ ಎರಡನೇ ದಿನದ ಅಂತ್ಯಕ್ಕೆ 80 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.
2ನೇ ಟೆಸ್ಟ್ ಮೊದಲ ದಿನ 73.5 ಓವರ್‌ಗಳಲ್ಲಿ ಭಾರತ 227 ರನ್‌ಗಳಿಗೆ ಬಾಂಗ್ಲಾದೇಶ ತಂಡವನ್ನು ಕಟ್ಟಿಹಾಕಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತ 8 ಓವರ್‌ಗಳಲ್ಲಿ 19 ರನ್ ಬಾರಿಸಿ ಯಾವುದೇ ವಿಕೆಟ್ ನಷ್ಟವಿಲ್ಲದೇ 208 ರನ್‌ಗಳ ಹಿನ್ನಡೆ ಕಾಯ್ದುಕೊಂಡಿತ್ತು.
ಇಂದು ಮತ್ತೆ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 314 ರನ್ ಗಳಿಸಿತು. ನಂತರ ಕ್ರೀಸ್‌ಗಿಳಿದ ಬಾಂಗ್ಲಾದೇಶ 6 ಓವರ್‌ಗಳಲ್ಲಿ 7 ರನ್‌ಗಳಿಸಿ, 8 ರನ್‌ಗಳ ಹಿನ್ನಡೆ ಕಾಯ್ದುಕೊಂಡಿದೆ.
2ನೇ ದಿನದ ಇನ್ನಿಂಗ್ಸ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್.ರಾಹುಲ್ ಹಾಗೂ ಶುಭಮನ್ ಗಿಲ್ ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ನಂತರದಲ್ಲಿ ಚೇತೇಶ್ವರ್ ಪೂಜಾರ (55 ಎಸೆತ) ಹಾಗೂ ವಿರಾಟ್ ಕೊಹ್ಲಿ ((73 ಎಸೆತ) ತಲಾ 24 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ತಂಡಕ್ಕೆ ಆಸರೆಯಾದರು.104 ಎಸೆತಗಳನ್ನು ಎದುರಿಸಿದ ರಿಷಭ್ ಪಂತ್ 94 ರನ್ (7 ಬೌಂಡರಿ, 5 ಸಿಕ್ಸರ್) ಚಚ್ಚಿ ಶತಕ ವಂಚಿತರಾದರೆ, 105 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ 87 ರನ್ (10 ಬೌಂಡರಿ, 2 ಸಿಕ್ಸರ್) ಸಿಡಿಸಿ ಮಿಂಚಿದರು.
ನಂತರದಲ್ಲಿ ಕಣಕ್ಕಿಳಿದ ಅಕ್ಷರ್ ಪಟೇಲ್ 4 ರನ್, ಆರ್.ಅಶ್ವಿನ್ 12 ರನ್, ಉಮೇಶ್ ಯಾದವ್ 14 ರನ್, ಮೊಹಮ್ಮದ್ ಸಿರಾಜ್ 7 ರನ್ ಗಳಿಸಿದರೆ, ಜಯದೇವ್ ಉನಾದ್ಕಟ್ 14 ರನ್ ಗಳಿಸಿ ಅಜೇಯರಾಗುಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!