ಕಾಗದ ರಹಿತ ಬಜೆಟ್‌ 2023 : ಟ್ಯಾಬ್ಲೆಟ್‌ ಹಿಡಿದುಕೊಂಡು ಬಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪ್ರಸ್ತುತ ಸರ್ಕಾರದ ಅಡಿಯಲ್ಲಿ ತಮ್ಮ ಐದನೇ ಮತ್ತು ಕೊನೆಯ ಬಜೆಟ್ ಮಂಡನೆಗಾಗಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಆಧುನಿಕ ‘ಬಹಿ-ಖಾತಾ’ ಶೈಲಿಯ ಚೀಲದಲ್ಲಿ ಡಿಜಿಟಲ್‌ ಟ್ಯಾಬ್ಲೆಟ್ ಅನ್ನು ತೆಗೆದುಕೊಂಡು ಸಂಸತ್ತಿಗೆ ತೆರಳಿದ್ದಾರೆ.

ಗರಿಗರಿಯಾದ ಕೆಂಪು ಸೀರೆಯನ್ನು ಉಟ್ಟು, ಹಣಕಾಸು ಸಚಿವ ಡಾ. ಭಾಗವತ್ ಕಿಶನ್‌ರಾವ್ ಕರಾಡ್ ಮತ್ತು ಪಂಕಜ್ ಚೌಧರಿ ಮತ್ತು ಅವರ ಸಚಿವಾಲಯದ ಇತರ ಅಧಿಕಾರಿಗಳೊಂದಿಗೆ ಸೀತಾರಾಮನ್ ಇಂದು ಬೆಳಿಗ್ಗೆ 11 ಗಂಟೆಗೆ ಬಜೆಟ್ ಮಂಡಿಸುವ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದಾರೆ.

ಭಾರತದ ಮೊದಲ ಪೂರ್ಣ ಸಮಯದ ಮಹಿಳಾ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್‌ ಅವರು, ಜುಲೈ 2019 ರಿಂದ ಕೇಂದ್ರ ಬಜೆಟ್‌ ಮಂಡಿಸುತ್ತಿದ್ದು, ಸಾಂಪ್ರದಾಯಿಕ ʼಬಹಿ-ಖಾತಾʼ ಬಜೆಟ್‌ ಬ್ರೀಫ್‌ಕೇಸ್‌ನ ವಸಾಹತುಶಾಹಿ ಪರಂಪರೆಗೆ ತಿಲಾಂಜಲಿ ಹಾಡಿದ್ದರು.

2021ರ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಟ್ಯಾಬ್ಲೆಟ್‌ನ ಬಳಕೆಯೂ ಅನಿವಾರ್ಯವಾಯಿತು ಏಕೆಂದರೆ ಕಾಗದದ ಬಳಕೆಯನ್ನು ಕಡಿಮೆ ಮಾಡುವುದು ಸಮಯದ ಅಗತ್ಯವಾಗಿತ್ತು.

ಸೀತಾರಾಮನ್ ಅಂದಿನಿಂದ ಬಹಿ-ಖಾತಾ ಬಳಸಿ ತಮ್ಮ ಬಜೆಟ್ ದಾಖಲೆಗಳನ್ನು ಸಾಗಿಸುವ ಅಭ್ಯಾಸವನ್ನು ಮುಂದುವರೆಸಿದ್ದಾರೆ. ಬ್ರೀಫ್‌ಕೇಸ್‌ಗಿಂತ ಬಹಿ-ಖಾತಾ ಕೊಂಡೊಯ್ಯುವುದು ಸುಲಭ ಎಂದು ಹಣಕಾಸು ಸಚಿವರು ಈ ಹಿಂದೆ ಒಪ್ಪಿಕೊಂಡಿದ್ದಾರೆ.

ಇದಲ್ಲದೆ ನೀತಿ ನಿರೂಪಕರು ಮತ್ತು ಸಾರ್ವಜನಿಕರಿಗೆ ಬಜೆಟ್ ದಾಖಲೆಗಳನ್ನು ಸುಲಭವಾಗಿ ಪ್ರವೇಶಿಸುವಂತೆ ಮಾಡಲು ಸರ್ಕಾರವು ಕಳೆದ ವರ್ಷ “ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್” ಅನ್ನು ಪ್ರಾರಂಭಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!