ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ನ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಯೋಗೇಶ್ ಕಥುನಿಯಾ ಪುರುಷರ ಡಿಸ್ಕಸ್ ಥ್ರೋ ಎಫ್ 56 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಯೋಗೇಶ್, ಸ್ಟೇಡ್ ಡಿ ಫ್ರಾನ್ಸ್ನಲ್ಲಿ 42.22 ಮೀಟರ್ ಎಸೆಯುವ ಮೂಲಕ ಋತುವಿನ ಅತ್ಯುತ್ತಮ ಸಾಧನೆಯನ್ನು ಪುನರಾವರ್ತಿಸಿದರು.
ತಮಗೆ ನೀಡಲಾದ 6 ಪ್ರಯತ್ನಗಳಲ್ಲಿ, ಯೋಗೇಶ್ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದರು.
ತಮ್ಮ ವೃತ್ತಿಜೀವನದಲ್ಲಿ ಸರಣಿ ಪದಕಗಳನ್ನು ಗೆದ್ದಿರುವ ಭಾರತೀಯ ಪ್ಯಾರಾ-ಅಥ್ಲೀಟ್ ಚಿನ್ನದ ಪದಕದ ಗುರಿ ಹೊಂದಿದ್ದರು. ಆದರೆ ಬ್ರೆಜಿಲ್ನ ಕ್ಲಾಡಿನಿ ಬಾಟಿಸ್ಟಾ 46.86 ಮೀಟರ್ ಎಸೆದು ಪ್ಯಾರಾಲಿಂಪಿಕ್ಸ್ ದಾಖಲೆ ನಿರ್ಮಿಸುವ ಮೂಲಕ ಚಿನ್ನದ ಪದಕ ಗೆದ್ದರು. ಯೋಗೇಶ್ ತಮ್ಮ ಋತುವಿನ ಅತ್ಯುತ್ತಮ ಎಸೆತದೊಂದಿಗೆ ಉತ್ತಮವಾಗಿ ಪ್ರಾರಂಭಿಸಿದರು.