ಹೊಸದಿಗಂತ ವರದಿ, ಮಂಡ್ಯ:
ಅಕಾಲಿಕ ಮರಣಕ್ಕೆ ತುತ್ತಾದ ಮಗನ ಕಣ್ಣುಗಳನ್ನು ದಾನ ಮಾಡುವ ಮೂಲಕ ಇಬ್ಬರಿಗೆ ಬಾಳಿಗೆ ಬೆಳಕು ನೀಡಿ ಮಗನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದ ಘಟನೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗಣ್ಣನವರ ಪುತ್ರ ಪ್ರಮೋದ್ಕುಮಾರ್ (25) ಎಂಬಾತನೇ ತಾನು ಸಾವನ್ನಪ್ಪಿ ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದಾತ.
ಬೆಂಗಳೂರಿನ ಬಾರೊಂದರಲ್ಲಿ ಕ್ಯಾಷಿಯರ್ ಆಗಿ ಜೀವನ ನಡೆಸುತ್ತಿದ್ದ ಪ್ರಮೋದ್ಕುಮಾರ್ ಅನಾರೋಗ್ಯದಿಂದ ಮೃತಪಟ್ಟಿದ್ದಘಿ. ಸುದ್ಧಿ ತಿಳಿದ ತಕ್ಷಣ ಆತನ ಪೋಷಕರು ಶವವನ್ನು ಬೆಂಗಳೂರಿನ ವಿಕ್ಟೋರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದರು.
ಮಗ ಮೃತಪಟ್ಟಿದ್ದಾನೆ. ಆತ ವಾಪಸ್ಸು ಬರುವುದಿಲ್ಲಘಿ. ಆತನ ಕಣ್ಣುಗಳನ್ನಾದರೂ ದಾನ ಮಾಡಬಹುದೆ ಎಂದು ವೈದ್ಯರಿಗೆ ಪೋಷಕರು ಕೇಳಿದ್ದಾರೆ. ತಕ್ಷಣ ಎಚ್ಚೆತ್ತ ವೈದ್ಯರು ಸಂಬಂಧಿಸಿದ ವೈದ್ಯರನ್ನು ಕರೆಯಿಸಿ ಪ್ರಮೋದ್ಕುಮಾರ್ನ ಕಣ್ಣುಗಳನ್ನು ತೆಗೆದು ಇಬ್ಬರು ಅಂಧರಿಗೆ ಶಸ ಚಿಕಿತ್ಸೆ ಮೂಲಕ ಅಳವಡಿಸಿದ್ದಾರೆ. ದುಃಖದ ನಡುವೆಯು ಪೋಷಕರು ಇಬ್ಬರು ಅಂಧರ ಬಾಳಿಕೆ ನೀಡಿ ತಮ್ಮ ಸಾವಿನಲ್ಲೂ ಸಾರ್ಥಕತೆ ಕಂಡುಕೊಂಡಿದ್ದಾರೆ.
ಇಬ್ಬರು ಅಂಧರ ಜೀವನಕ್ಕೆ ಬೆಳಕಾದ ಪೋಷಕರ ಕಾರ್ಯಕ್ಕೆ ಊರಿನ ಜನರು, ಇತರೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.