Wednesday, June 7, 2023

Latest Posts

ಆಪ್‌ ಸಂಸದ ರಾಘವ್‌ ಚಡ್ಡಾ ಜೊತೆ ಬಾಲಿವುಡ್‌ ನಟಿ ಪರಿಣಿತಿ ನಿಶ್ಚಿತಾರ್ಥ

ಹೊಸದಿಗಂತ ಡಜಿಟಲ್ ಡೆಸ್ಕ್:‌

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಆಪ್ ಪಕ್ಷದ ಸಂಸದನಾಗಿರುವ ರಾಘವ್​ ಚಡ್ಡಾ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಈ ಸಮಾರಂಭಕ್ಕೆ ಚಿತ್ರರಂಗದ ಅನೇಕ ಗಣ್ಯರು ಹಾಗೂ ರಾಜಕೀಯ ನಾಯಕರು ಪಾಲ್ಗೊಂಡಿದ್ದರು.

ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಬಹುದಿನಗಳಿಂದ ಒಟ್ಟಾಗಿ ಕಾಣಿಸಿಕೊಂಡಿದ್ದ ಈ ಜೋಡಿ ಕುರಿತು ಅನೇಕ ಗಾಸಿಪ್​ಗಳು ಕೇಳಿ ಬಂದಿದ್ದವು. ಈ ಬೆನ್ನಲ್ಲೇ ಈ ಜೋಡಿ ಎಂಗೇಜ್ ಮೆಂಟ್ ಮಾಡಿಕೊಂಡು ವದಂತಿಗಳಿಗೆ ತೆರೆ ಹಾಕಿದ್ದಾರೆ. ಕಪೂರ್ತಲ ಹೌಸ್​ನಲ್ಲಿ ನಡೆದ ಸಮಾರಂಭದಲ್ಲಿ ಈ ಜೋಡಿಯು ಸಂಬಂಧಿಕರು ಹಾಗೂ ಆಪ್ತರ ಸಮ್ಮುಖದಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಈ ಜೋಡಿಗೆ ನಟ ನೀಲ್ ನಿತಿನ್ ಮುಕೇಶ್, ರಣ್‌ವೀರ್ ಸಿಂಗ್, ಕಪಿಲ್ ಶರ್ಮಾ, ಅನುಷ್ಕಾ ಶರ್ಮಾ,ನೇಹಾ ಧೂಪಿಯಾ, ಸೈನಾ ನೆಹ್ವಾಲ್, ಅಥಿಯಾ ಶೆಟ್ಟಿ, ಮನೀಶ್ ಮಲ್ಹೋತ್ರಾ, ನೀಲ್ ನಿತಿನ್ ಮುಕೇಶ್ ಮುಂತಾದ ಗಣ್ಯರು ಶುಭ ಹಾರೈಸಿದ್ದಾರೆ. ನಿಶ್ಚಿತಾರ್ಥ ಪೋಟೊಗಳನ್ನು ನಟಿ ಪರಿಣಿತಿ ಚೋಪ್ರಾ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!