ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಪರಿಣಿತಿ ಚೋಪ್ರಾ ಪ್ರೆಗ್ನೆಂಟ್ ಎನ್ನುವ ಸುದ್ದಿ ಬಿಟೌನ್ ಅಂಗಳದಲ್ಲಿ ಓಡಾಡಿದೆ.
ನಟಿ ಏರ್‌ಪೋರ್ಟ್ ಒಂದರಲ್ಲಿ ಲೂಸ್ ಆದ ಟೀಶರ್ಟ್ ಧರಿಸಿ ನಿಧಾನಕ್ಕೆ ಹೆಜ್ಜೆ ಹಾಕಿದ್ದೇ ತಡ, ಅವರು ಪ್ರೆಗ್ನೆಂಟ್ ಎಂದು ಹೇಳಲಾಗಿತ್ತು.
ಆದರೆ ಪರಿಣೀತಿ ಇದೆಲ್ಲಾ ರೂಮರ್ಸ್, ನಾನು ಪ್ರೆಗ್ನೆಂಟ್ ಅಲ್ಲ. ಯಾರು ಈ ರೀತಿ ಸುಳ್ಳು ಸುದ್ದಿ ಹಬ್ಬುತ್ತಿದ್ದಾರೆ ಎಂದು ಗರಂ ಆಗಿದ್ದಾರೆ. ಸದ್ಯ ನಟಿ ಅಮರ್ ಸಿಂಗ್ ಚಮ್ಕಿಲಾ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ.