CINEMA | ಗುಟ್ಟಾಗಿ ನಡೆದೇ ಹೋಯ್ತು ಪರಿಣಿತಿ-ರಾಘವ್ ಚಡ್ಡಾ ರೋಕಾ, ಅಕ್ಟೋಬರ್‌ನಲ್ಲಿ ಮದುವೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಪರಿಣಿತಿ ಚೋಪ್ರಾ ಹಾಗೂ ಆಪ್ ನಾಯ ರಾಘವ್ ಚಡ್ಡಾ ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

ಸಿನಿಮಾಗಳಲ್ಲಿ ಅಷ್ಟೇನೂ ಯಶಸ್ಸು ಕಾಣದ ಪರಿಣಿತಿ ಇದೀಗ ವೈಯಕ್ತಿಕ ವಿಚಾರಕ್ಕಾಗಿ ಚರ್ಚೆಯಲ್ಲಿದ್ದಾರೆ. ರಾಘವ್ ಚಡ್ಡಾ ಜತೆ ಸಾಕಷ್ಟು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಇವರು ಡೇಟಿಂಗ್‌ನಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

ಇದೀಗ ಇಬ್ಬರ ರೋಖಾ ಮುಗಿದಿದ್ದು, ಪರಿಣಿತಿ ಕೈಯಲ್ಲಿ ಹೊಸದಾದ ಉಂಗುರ ಕಾಣಿಸುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್‌ನಲ್ಲಿ ಈ ಜೋಡಿ ಹಸೆಮಣೆ ಏರಲಿದೆ.

ಸಾಕಷ್ಟು ಬಾರಿ ಚೋಪ್ರಾಗೆ ಡೇಟಿಂಗ್ ಪ್ರಶ್ನೆ ಎದುರಾಗಿದ್ದು, ಪರಿಣಿತಿ ಎಲ್ಲಿಯೂ ಮಾತನಾಡಿಲ್ಲ, ಎಲ್ಲ ಪ್ರಶ್ನೆಗಳಿಗೂ ನಕ್ಕು ಸುಮ್ಮನಾಗಿದ್ದಾರೆ. ಪರಿಣಿತಿ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ರಾಘವ್ ಕೂಡ ರಾಜಕೀಯದಲ್ಲಿ ಬ್ಯುಸಿ ಇದ್ದು, ಅಕ್ಟೋಬರ್‌ನಲ್ಲಿ ಮದುವೆಗೆ ಮಹೂರ್ತ ಫಿಕ್ಸ್ ಆಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!