ಗಿರವಿ ಇಟ್ಟ ಚಿನ್ನಾಭರಣ ದುರುಪಯೋಗ; ಖಾಸಗಿ ಫೈನಾನ್ಸ್‌ ಮ್ಯಾನೇಜರ್ ಬಂಧನ

ಹೊಸದಿಗಂತ ವರದಿ, ಮಂಡ್ಯ
ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಗಿರವಿ ಇಟ್ಟಿದ್ದ ಚಿನ್ನ ಮತ್ತು ಹಣವನ್ನು ದುರುಪಯೋಗಪಡಿಸಿಕೊಂಡು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 1.03 ಕೋಟಿ ರೂ. ವೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಘಿಕ ಎನ್. ಯತೀಶ್ ತಿಳಿಸಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮದ್ದೂರಿನ ಐಐಎ್ಎಲ್ ೈನಾನ್ಸ್ ಲಿ. ಸಂಸ್ಥೆಯಲ್ಲಿ ಉಸ್ತುವಾರಿ ಬ್ರಾಂಚ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮದ್ದೂರು ತಾಲೂಕು ಕರಡಕೆರೆ ಗ್ರಾಮದ ಶಿವಶಂಕರ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಮದ್ದೂರಿನ ಐಐಎ್ಎಲ್ ಫೈನಾನ್ಸ್ ಸಂಸ್ಥೆಯಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶಿವಶಂಕರ್ ಹಣ ದುರುಪಯೋಗಪಡಿಸಿಕೊಂಡು ಕಂಪನಿಗೆ ವಂಚನೆ ಮಾಡಿದ್ದ. ಅಲ್ಲದೆ, 12.38 ಲಕ್ಷ ರೂ. ಹಣವನ್ನು ನಷ್ಟವನ್ನುಂಟುಮಾಡಿದ್ದ ಎಂದು ಸಂಸ್ಥೆಯ ಟೆರಿಟೆರಿ ಮ್ಯಾನೇಜರ್ ಮೋಹನ್‌ಕುಮಾರ್ ಎಂಬುವರು ದೂರು ನೀಡಿದ್ದರು ಎಂದು ವಿವರಿಸಿದರು.
ಮೋಹನ್‌ಕುಮಾರ್ ಮತ್ತೊಂದು ದೂರು ನೀಡಿ ಸಂಸ್ಥೆಯಲ್ಲಿ ಚಿನ್ನಾಭರಣಗಳನ್ನು ಗಿರವಿ ಇಟ್ಟಿದ್ದ 64 ಗ್ರಾಹಕರ ಅಕೌಂಟ್‌ಗಳಲ್ಲಿನ 2958.50 ಗ್ರಾಂ. ತೂಕದ ಚಿನ್ನಾಭರಣಗಳನ್ನು ಸಹ ಆರೋಪಿ ಶಿವಶಂಕರ್ ದುರುಪಯೋಗಪಡಿಸಿದ್ದಾನೆ ಎಂದು ಆರೋಪಿಸಿದ್ದರು.
ಸದರಿ ಪ್ರಕರಣದ ಆರೋಪಿಯ ಪತ್ನಿ ಸಹ ತನ್ನ ಗಂಡ ನಾಪತ್ತೆಯಾಗಿದ್ದಾನೆ ಎಂದು ಮದ್ದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಎರಡೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ಪತ್ತೆಗೆ ತಂಡವನ್ನು ರಚಿಸಲಾಗಿತ್ತು. ಆರೋಪಿ ನಾಪತ್ತೆಯಾದ 10 ದಿನಗಳ ನಂತರ ಹುಲಿಯೂರುದುರ್ಗ ಬಸ್ ನಿಲ್ದಾಣದಲ್ಲಿ ಆರೋಪಿ ಶಿವಶಂಕರ್‌ನನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಆತ ನೀಡಿನ ಸುಳಿವಿನ ಮೇರೆಗೆ ಮದ್ದೂರಿನ ಮುತ್ತೋಟ್‌ ಫೈನಾನ್ಸ್‌, ಮಣಪುರಂ ಗೋಲ್ಡ್‌ ಫೈನಾನ್ಸ್, ಕೋಶಮಟ್ಟಂ ಫೈನಾನ್ಸ್, ಹಾಗೂ ಸುಮತಿ ಜ್ಯೂಯಲರಿ ಅಂಗಡಿಯಲ್ಲಿ ಗಿರವಿ ಇಟ್ಟಿದ್ದ 1,943.5 ಕೆ.ಜಿ. ಚಿನ್ನಾಭರಣ ಮತ್ತು ಒಂದು ಬುಲೆಟ್ ಬೈಕ್ ಸೇರಿದಂತೆ ಒಟ್ಟು 1,03,80,550 ರೂ. ವೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಡಿವೈಎಸ್ಪಿ ನಾರಾಯಣಪ್ರಸಾದ್ ನೇತೃತ್ವದಲ್ಲಿ ಮದ್ದೂರು ಗ್ರಾಮಾಂತರ ಸಿಪಿಐ ಬಿ.ಆರ್.ಗೌಡ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!