ಪೂರ್ವ ಮುಂಗಾರಿಗೆ ರಾಜಸ್ಥಾನ ತತ್ತರ: ರಸ್ತೆಗಳಲ್ಲಿ ಪ್ರವಾಹ ಸೃಷ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೋಮವಾರ ಪೂರ್ವ ಮುಂಗಾರು ಮಳೆಯು ರಾಜಸ್ಥಾನದ ಹಲವಾರು ಜಿಲ್ಲೆಗಳಲ್ಲಿ ಅಪ್ಪಳಿಸಿದೆ. ಬಾರ್ಮರ್‌ನಲ್ಲಿ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶ, ರಸ್ತೆಗಳು ಸೇರಿದಂತೆ ಹಲವೆಡೆ ಪ್ರವಾಹವೇ ಸೃಷ್ಟಿಯಾಗಿದೆ. ಬಾರ್ಮರ್‌ನ ಹಲವಾರು ರಸ್ತೆಗಳು ಜಲಾವೃತಗೊಂಡಿದ್ದು, ಅಪಾರ ಆಸ್ತಿ-ಪಾಸ್ತಿ ನಷ್ಟವಾಗಿದೆ. ಅನೇಕ ಕಟ್ಟಡಗಳಿಗೆ ನುಗ್ಗಿದ ಮಳೆ ನೀರಿನಿಂದ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಅನೇಕ ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ ಎಂದು ಮಾಲೀಕರು ದೂರು ದಾಖಲು ಮಾಡಿದ್ದಾರೆ. ಹಲವೆಡೆ ಮರ, ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ವಿದ್ಯುತ್‌ ಸಂಪರ್ಕ ಕಡಿತವಾಗಿದೆ.

ರಾಜ್ಯದ ಬಹುತೇಕ ನಗರಗಳಲ್ಲಿ ತಾಪಮಾನ 25.4 ಡಿಗ್ರಿ ಸೆಲ್ಸಿಯಸ್ ನಿಂದ 32.2 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ 24 ಗಂಟೆಗಳಲ್ಲಿ ಅಜ್ಮೀರ್, ಅಲ್ವಾರ್, ಬನ್ಸ್ವಾರಾ, ಚಿತ್ತೋರ್‌ಗಢ, ಭಿಲ್ವಾರಾ, ಬುಂದಿ, ಕೋಟಾ, ಬರನ್, ಟೋಂಕ್, ಜೈಪುರ, ಜಲವಾರ್, ಡುಂಗರ್‌ಪುರ್, ಪ್ರತಾಪ್‌ಗಢ, ರಾಜ್‌ಸಮಂದ್, ಉದಯಪುರ, ಜಲೋರ್ ಮತ್ತು ಪಾಲಿ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಮತ್ತು ಜೋರಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!