VIRAL VIDEO| ಕೋಪದಲ್ಲಿ ಫ್ಲೈಟ್ ಅಟೆಂಡೆಂಟ್‌ಗೆ ಹೊಡೆದು ರಾದ್ದಾಂತ ಸೃಷ್ಟಿಸಿದ ಪ್ರಯಾಣಿಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಹಪ್ರಯಾಣಿಕನ ಜೊತೆ ಕ್ಷುಲ್ಲಕ ವಾಗ್ವಾದಕ್ಕಿಳಿದ ಭೂಪನೊಬ್ಬ ವಿಮಾನ ಸಿಬ್ಬಂದಿಗೆ ಹೊಡೆದು ರಾದ್ದಾಣತ ಸೃಷ್ಟಿಸಿದ್ದಾನೆ. ಬಳಿಕ ವಿಮಾನದಿಂದ ಜಿಗಿಯಲು ಪ್ರಯತ್ನಿಸಿದ ಪರಿಣಾಮವಾಗಿ, ಭವಿಷ್ಯದಲ್ಲಿ ವಿಮಾನ ಹತ್ತದಂತೆ ನಿರ್ಬಂಧ ವಿಧಿಸಲಾಯಿತು. ಯುನೈಟೆಡ್ ಏರ್ಲೈನ್ಸ್ ವಿಮಾನವು ಟೆಕ್ಸಾಸ್ಗೆ ಹೊರಟಿತು. ಬೆಂಜಮಿನ್ ಲೋವಿನ್ಸ್ ಎಂಬ ಪ್ರಯಾಣಿಕರು ವಿಮಾನ ಟೇಕ್-ಆಫ್ ಸಮಯದಲ್ಲಿ ಕೋಪದಿಂದ ತುರ್ತು ನಿರ್ಗಮನದಿಂದ ಜಿಗಿಯಲು ಪ್ರಯತ್ನಿಸಿದರು. ಆ ವೇಳೆ ಅವರನ್ನು ತಡೆದ ವಿಮಾನ ಸಿಬ್ಬಂದಿಗೆ ಹೊಡೆದಿದ್ದಾರೆ. ಜಿಮೆನೆಜ್ ಎಂಬ ಪ್ರಯಾಣಿಕ ಇಡೀ ಗಲಾಟೆಯ ವಿಡಿಯೋ ತೆಗೆದಿದ್ದು, ಸದ್ಯ ವೈರಲ್‌ ಆಗಿದೆ.

ಜಿಮೆನೆಜ್‌ಗೆ ಮೀಸಲಿಟ್ಟ ಆಸನದಲ್ಲಿ ಲೋವಿನ್ಸ್ ಅವರ ಪತ್ನಿ ಕುಳಿತರು. ಜಿಮೆನೆಜ್ ಆಕೆಯನ್ನು ಎದ್ದೇಳಲು ಕೇಳಿದ್ದಕ್ಕೆ ಲೋವಿನ್ಸ್ ತುಂಬಾ ಕೋಪಗೊಂಡು ಕೂಡಲೇ ಜಗಳಕ್ಕೆ ಇಳಿದರು. ತನಗೆ ತೆರಳುವಂತೆ ಹೇಳಲು ಬಂದಿದ್ದ ಗಗನಸಖಿಯೊಬ್ಬರಿಗೂ ಲೋವಿನ್ಸ್ ಹೊಡೆದಿದ್ದಾರೆ. ಬಳಿಕ ಪತ್ನಿಗೂ ಥಳಿಸಲು ಆರಂಭಿಸಿದ. ತಕ್ಷಣವೇ ವಿಮಾನದ ತುರ್ತು ಬಾಗಿಲಿನಿಂದ ಜಿಗಿಯಲು ಯತ್ನಿಸಿದರು. ಈ ಎಲ್ಲ ಘಟನೆಯಿಂದಾಗಿ  ಇತರ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.

ವಿಮಾನಗಳಲ್ಲಿ ಇಂತಹ ಘಟನೆಗಳು ವಿಪರೀತವಾಗಿ ಹೆಚ್ಚುತ್ತಿವೆ ಎಂದು ನೆಟ್ಟಿಗರು ಕಳವಳ ವ್ಯಕ್ತಪಡಿಸಿದರು. ಯುನೈಟೆಡ್ ಏರ್ಲೈನ್ಸ್ ಕೂಡ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದೆ. ಲೋವಿನ್ಸ್ ಭವಿಷ್ಯದಲ್ಲಿ ಹಾರಾಟ ಮಾಡುವುದನ್ನು ನಿಷೇಧಿಸಲಾಗಿದೆ, ಅವರ ಕ್ರಮಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!