ರನ್‌ ವೇ ನಲ್ಲಿ ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿಯಾದ ವಿಮಾನ: ಇಬ್ಬರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪೆರು ದೇಶದ ಜಾರ್ಜ್ ಚಾವೆಜ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಟೇಕ್ ಆಫ್ ಆಗುತ್ತಿದ್ದ ಪ್ರಯಾಣಿಕರ ವಿಮಾನವೊಂದು ಅಗ್ನಿಶಾಮಕ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಈ ವಿಡಿಯೋ ಅಂತರ್ಜಾಲ್ಲಿ ಬಾರೀ ವೈರಲ್‌ ಆಗುತ್ತಿದ್ದು ಹಲವಾರು ಪ್ರತಿಕ್ರಿಯಗಳನ್ನು ಪಡೆಯುತ್ತದೆ.  ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಅಥವಾ ವಿಮಾನ ಸಿಬ್ಬಂದಿ ಸಾವನ್ನಪ್ಪಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಲಾತಮ್ ಏರ್‌ಬಸ್ 320ಎನ್‌ಇಒ ವಿಮಾನದಲ್ಲಿ 102 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಾಹಿತಿ ಇಲ್ಲದೆ ಅಗ್ನಿಶಾಮಕ ವಾಹನವೂ ಅದೇ ರನ್‌ ವೇ ನಲ್ಲಿ ಚಲಿಸುತ್ತಿತ್ತು. ಅದರ ಚಾಲಕ ಕೊನೆ ಹಂತದಲ್ಲಿ ವಾಹನನ್ನು ತಿರುಗಿಸಲು ಯತ್ನಿಸಿದ್ದಾನೆ, ಅಷ್ಟರಲ್ಲಿ ವೇಗವಾಗಿ ಬಂದ ವಿಮಾನವು ಡಿಕ್ಕಿ ಹೊಡೆದಿದೆ. ಅಪಘಾತ ಬಳಿಕ ವಿಮಾನದ ಕೆಳಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಘಟನೆ ಬಳಿಕ ನಿಲ್ದಾಣವು ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ ಮತ್ತು ಅಪಘಾತದ ಕಾರಣಗಳನ್ನು ತನಿಖೆ ನಡೆಸುತ್ತಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!