VIRAL PHOTO| ಬೀದರ್-ಯಶವಂತಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕೇಳೋರಿಲ್ಲ ಪ್ರಯಾಣಿಕರ ಗೋಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೀದರ್-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಸ್ಲೀಪರ್ ಕೋಚ್‌ನ ನೆಲದ ಮೇಲೆ ಪ್ರಯಾಣಿಕರು ಮಲಗಿರುವ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಸಾಮಾನ್ಯ ಬೋಗಿಗಳು ತುಂಬಿ ಪ್ರಯಾಣಿಕರು ಸ್ಲೀಪರ್ ಕೋಚ್‌ ಕೂಡ ತುಂಬಿ ತುಳುಕುತ್ತಿದೆ. ಬೀದರ್-ಯಶವಂತಪುರ ಎಕ್ಸ್ ಪ್ರೆಸ್ ರೈಲಿನ್ಲಲಿ ಹೆಜ್ಜೆ ಹಾಕಲು ಜಾಗವಿಲ್ಲದಂತಾಗಿದೆ.

ಇದಕ್ಕೆ ಸಂಬಂಧಿಸಿದ ಫೋಟೋವನ್ನು ರಮೇಶ್ ಎಂಬ ಟ್ವಿಟರ್ ಬಳಕೆದಾರರು ಶೇರ್ ಮಾಡಿದ್ದಾರೆ. ಇದು ನಿನ್ನೆ ಬೀದರ್-ವೈಪಿಆರ್ ರೈಲಿನ ಪರಿಸ್ಥಿತಿ. ಸಾಮಾನ್ಯ ಟಿಕೆಟ್ ತೆಗೆದುಕೊಂಡಿದ್ದ ಎಲ್ಲ ಪ್ರಯಾಣಿಕರು ಸ್ಲೀಪರ್ ಕೋಚ್ ಹತ್ತಿದರು. 7.40ಕ್ಕೆ ಬರಬೇಕಿದ್ದ ರೈಲು 10.30ಕ್ಕೆ ಬಂತು. ಈ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಬಗ್ಗೆ ಸ್ವಲ್ಪ ಗಮನ ಕೊಡಿ’ ಎಂದು ರೈಲ್ವೆ ಇಲಾಖೆ ಹಾಗೂ ರೈಲ್ವೆ ಸಚಿವರನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.

ರೈಲುಗಳಲ್ಲಿ ಸ್ಲೀಪರ್ ಮತ್ತು ಜನರಲ್ ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸಿ ಮತ್ತು ಬೀದರ್‌ಗೆ ಹೊಸ ರೈಲುಗಳನ್ನು ಹಾಕುವಂತೆ ರಮೇಶ್ ರೈಲ್ವೆ ಅಧಿಕಾರಿಗಳಿಗೆ ಕೇಳಿದರು. ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅನೇಕ ಜನರು ಅವರನ್ನು ಬೆಂಬಲಿಸಿ ಕಾಮೆಂಟ್ ಮಾಡಿದ್ದಾರೆ. ರಮೇಶ್ ಅವರ ಟ್ವೀಟ್ ಗೆ ರೈಲ್ವೆ ಸೇವಾ ಇಲಾಖೆಯೂ ಪ್ರತಿಕ್ರಿಯೆ ನೀಡಿದೆ. PNR ವಿವರಗಳನ್ನು ಹಂಚಿಕೊಳ್ಳಲು ರಮೇಶ್‌ಗೆ ಕೇಳಿದೆ.  ಪ್ರಯಾಣಿಕರ ಸಮಸ್ಯೆ ಬಗೆಹರಿಸಲು ರೈಲ್ವೆ ಅಧಿಕಾರಿಗಳು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!