ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪಿಎಂ ಕೇರ್ಸ್ ಫಂಡ್ ಗೆ ದೇಣಿಗೆ ನೀಡುವುದಿಲ್ಲ ಎಂದ ಪ್ಯಾಟ್ ಕಮ್ಮಿನ್ಸ್: ಕಾರಣವೇನು ಗೊತ್ತಾ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಆಸ್ಟ್ರೇಲಿಯಾದ ವೇಗದ ಬೌಲರ್, ಕೋಲ್ಕತಾ ನೈಟ್ ರೈಡರ್ಸ್‌ನ ಪ್ಯಾಟ್ ಕಮ್ಮಿನ್ಸ್ ಇತ್ತೀಚೆಗೆ ಭಾರತದ ಕೊರೋನಾ ರೋಗಿಗಳಿಗೆ ಆಮ್ಲಜನಕದ ಸರಬರಾಜಿಗೆ ಸಹಾಯವಾಗಲು 50000 ಡಾಲರ್​ ಹಣವನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಪಿಎಂ ಕೇರ್ಸ್ ಫಂಡ್​ಗೆ 37 ಲಕ್ಷ ರೂಪಾಯಿ ನೀಡುವ ಬಗ್ಗೆ ಮಾತನಾಡಿದರು. ಆದರೆ ಈಗ ಅವರು ಪಿಎಂ ಕೇರ್ಸ್ ಫಂಡ್ ಬದಲಿಗೆ ಬೇರೆಡೆ ಹಣವನ್ನು ನೀಡಿದ್ದಾರೆ.
ಪ್ಯಾಟ್ ಕಮ್ಮಿನ್ಸ್ ಈ ಹಣವನ್ನು ಯುನಿಸೆಫ್ ಆಸ್ಟ್ರೇಲಿಯಾದ ‘ಇಂಡಿಯಾ ಕೋವಿಡ್ -19 ಕ್ರೈಸಿಸ್ ಅಪೀಲ್‌’ ಗೆ ನೀಡಿದ್ದಾರೆ. ಕಮ್ಮಿನ್ಸ್ ಈ ಮೊತ್ತವನ್ನು ಒಂದು ವಾರದ ಹಿಂದೆ ಪಿಎಂ ಕೇರ್ಸ್ ಫಂಡ್‌ಗೆ ನೀಡುವುದಾಗಿ ಭರವಸೆ ನೀಡಿದ್ದರು.

ಭಾರತವು ಗಂಭೀರ ಆರೋಗ್ಯ ಬಿಕ್ಕಟ್ಟಿನಿಂದ ಬಳಲುತ್ತಿದ್ದು, 27 ವರ್ಷದ ವೇಗದ ಬೌಲರ್ ಕಳೆದ ಸೋಮವಾರ ಕೋವಿಡ್‌ನ ಹೆಚ್ಚುತ್ತಿರುವ ಪ್ರಕರಣಗಳೊಂದಿಗೆ ಹೋರಾಡುತ್ತಿರುವ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಗಾಗಿ ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಕಮ್ಮಿನ್ಸ್ ಪಿಎಂ ಕೇರ್ಸ್ ಫಂಡ್‌ಗೆ ಹಣವನ್ನು ನೀಡುವುದಾಗಿ ಘೋಷಿಸಿದಾಗ, ಅನೇಕ ಜನರು ಸೋಷಿಯಲ್ ಮೀಡಿಯಾದಲ್ಲಿ ಅವರ ನಿರ್ಧಾರವನ್ನು ಪ್ರಶ್ನಿಸಿದರು. ಪಾರದರ್ಶಕತೆಯ ಕೊರತೆಯನ್ನು ಉಲ್ಲೇಖಿಸಿ ಹಣವನ್ನು ಬೇರೆಡೆ ದಾನ ಮಾಡಲು ಅವರನ್ನು ಕೇಳಿದ್ದರು. ಆದಾಗ್ಯೂ, ಪ್ಯಾಟ್ ಕಮ್ಮಿನ್ಸ್ ಅವರು ಪಿಎಂ ಕೇರ್ಸ್ ಫಂಡ್‌ಗೆ ಹಣವನ್ನು ನೀಡುವ ನಿರ್ಧಾರವನ್ನು ಏಕೆ ಬದಲಾಯಿಸಿದರು ಮತ್ತು ಯುನಿಸೆಫ್ ಆಸ್ಟ್ರೇಲಿಯಾವನ್ನು ಏಕೆ ಆರಿಸಿಕೊಂಡರು ಎಂಬುದನ್ನು ವಿವರಿಸಲಿಲ್ಲ.

ಯುನಿಸೆಫ್ ಆಸ್ಟ್ರೇಲಿಯಾಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಆರ್ಥಿಕ ನೆರವು ನೀಡಿದ ನಂತರ, ಕಮ್ಮಿನ್ಸ್ ತನ್ನ ಮನಸ್ಸನ್ನು ಬದಲಾಯಿಸಿದಂತೆ ತೋರುತ್ತದೆ. ಕಮಿನ್ಸ್ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹೀಗೆ ಬರೆದಿದ್ದಾರೆ, ‘ಕ್ರಿಕೆಟ್ ಆಸ್ಟ್ರೇಲಿಯಾ ಅದ್ಭುತ ಕೆಲಸ ಮಾಡಿದೆ, ನನ್ನ ದೇಣಿಗೆಯನ್ನು ಯುನಿಸೆಫ್ ಆಸ್ಟ್ರೇಲಿಯಾದ ಇಂಡಿಯಾ ಕೋವಿಡ್ -19 ಕ್ರೈಸಿಸ್ ಅಪೀಲ್‌ಗೆ ಹಂಚಿಕೆ ಮಾಡಿದ್ದೇನೆ. ನಿಮಗೆ ಸಾಧ್ಯವಾದರೆ, ದಯವಿಟ್ಟು ಯುನಿಸೆಫ್ ಆಸ್ಟ್ರೇಲಿಯಾವನ್ನು ಬೆಂಬಲಿಸಿ ಎಂದಿದ್ದಾರೆ.

ಭಾರತದ ಕೋವಿಡ್ -19 ವಿರುದ್ಧದ ಹೋರಾಟಕ್ಕೆ 50,000 ಆಸ್ಟ್ರೇಲಿಯಾ ಡಾಲರ್‌ಗಳನ್ನು ಸಹಾಯ ಮಾಡುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರ ವಾಗ್ದಾನ ಮಾಡಿದೆ ಮತ್ತು ತಮ್ಮ ಆಟಗಾರರ ಸಂಘ ಮತ್ತು ಯುನಿಸೆಫ್‌ನ ಬೆಂಬಲದೊಂದಿಗೆ ಹೆಚ್ಚಿನ ಹಣವನ್ನು ಸಂಗ್ರಹಿಸುವುದಾಗಿ ಹೇಳಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss