AUS vs WI: ಮತ್ತೊಮ್ಮೆ ಆಸ್ಟ್ರೇಲಿಯಾ ತಂಡದ ಕ್ಯಾಪ್ಟನ್‌ ಆದ ಸ್ಟೀವ್‌ ಸ್ಮಿತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಸ್ಟ್ರೇಲಿಯಾ ಖಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಗಾಯಗೊಂಡು ತಂಡದಿಂದ ಹೊರಬಿದ್ದ ಕಾರಣ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದ ನಾಯಕತ್ವವನ್ನು ವಹಿಸಲಿದ್ದಾರೆ.
ಆಸಿಸ್‌ ತಂಡದ ಬೌಲಿಂಗ್‌ ವಿಭಾಗದ ಶಕ್ತಿ ಕಮಿನ್ಸ್‌ ತೊಡೆಸಂಧು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಪರ್ತ್‌ನಲ್ಲಿ ನಡೆದ ಆರಂಭಿಕ ಟೆಸ್ಟ್‌ನ ಕೊನೆಯ ಎರಡು ದಿನಗಳಲ್ಲಿ ಬೌಲಿಂಗ್ ಮಾಡಿರಲಿಲ್ಲ. ಅದಾಗ್ಯೂ, ವಿಂಡೀಸ್‌ ವಿರುದ್ಧ ಆಸ್ಟ್ರೇಲಿಯಾ 164 ರನ್‌ಗಳ ಬೃಹತ್‌ ಜಯ ದಾಖಲಿಸಿದೆ. ಅಡಿಲೇಡ್‌ನಲ್ಲಿ ಗುರುವಾರ ಆರಂಭವಾಗಲಿರುವ ಹಗಲು-ರಾತ್ರಿ ಟೆಸ್ಟ್‌ಗೆ ಫಿಟ್ ಆಗಿರುವ ವಿಶ್ವಾಸವನ್ನು ಕಮ್ಮಿನ್ಸ್ ವ್ಯಕ್ತಪಡಿಸಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಚೇತರಿಸಿಕೊಂಡಿಲ್ಲ. ಕಮಿನ್ಸ್‌ ಸ್ಥಾನಕ್ಕೆ ಸ್ಕಾಟ್ ಬೋಲ್ಯಾಂಡ್ ರನ್ನು ಆಯ್ಕೆ ಮಾಡಲಾಗಿದೆ.
2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಯಾಂ ಡ್ ಪೇಪರ್ ಗೇಟ್ ಪ್ರಕರಣದಲ್ಲಿ ಭಾಗಿಯಾಗಿದ್ದಕ್ಕೆ ಸ್ಮಿತ್ , ವಾರ್ನರ್ ಮತ್ತು ಬ್ಯಾನ್ಕ್ರಾಫ್ಟ್ ಮೂವರನ್ನು ನಿಷೇಧಗೊಳಿಸಿ, ಸ್ಮಿತ್‌ ರನ್ನು ನಾಯಕತ್ವದಿಂದ ವಜಾಗೊಳಿಸಲಾಗಿತ್ತು. 32 ವರ್ಷದ ಬ್ಯಾಟರ್ ಸ್ಮಿತ್ ಮತ್ತೆ ಕಾಂಗರೂ ಪಡೆಯನ್ನು
ಮುನ್ನಡೆಸುವ ಬಯಕೆಯನ್ನು ವ್ಯಕ್ತಪಡಿಸಿದ್ದರಾದರೂ, ಕ್ರಿಕೆಟ್ ಆಸ್ಟ್ರೇ ಲಿಯಾ ಕಮಿನ್ಸ್ಗೆ ನಾಯಕತ್ವ ಪಟ್ಟ ಕಟ್ಟಿ, ಸ್ಮಿತ್‌ ರನ್ನು ಉಪನಾಯಕನನ್ನಾಗಿ ನೇಮಿಸಿತ್ತು.
ಕಳೆದ ವರ್ಷದ ಡಿಸೆಂಬರ್‌ ನಲ್ಲಿ ನಡೆದಿದ್ದ ಆಶಸ್‌ ಸರಣಿ ಎರಡನೇ ಟೆಸ್ಟ್‌ ನಲ್ಲಿ ಕಮಿನ್ಸ್ ಕೊರೋನಾ ಸೋಂಕಿಗೆ ಒಳಗಾಗಿದ್ದಾಗ ಮೂರೂವರೆ ವರ್ಷದ ಬಳಿಕ ಸ್ಮಿತ್‌ ಗೆ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು. ಈಗ ಮತ್ತೊಮ್ಮೆ ನಾಯಕತ್ವ ಜವಾಬ್ದಾರಿ ಹೊರಲಿದ್ದಾರೆ.
ಆಸ್ಟ್ರೇಲಿಯಾವು ಈ ಸರಣಿಯ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳನ್ನು ಆಡಲಿದೆ. ಆ ಬಳಿಕ 2023 ರಲ್ಲಿ ಪ್ರಬಲ ತಂಡ ಭಾರತಕ್ಕೆ ಮುಖಾಮುಖಿಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!