Saturday, February 4, 2023

Latest Posts

ಒಂದು ಸಿನಿಮಾ…8 ದೇಶಗಳಲ್ಲಿ ಶೂಟಿಂಗ್: ‘ಪಠಾಣ್’ ಮೂಲಕ ಗ್ರ್ಯಾಂಡ್ ಕಮ್ ಬ್ಯಾಕ್ ನೀಡಲು ಶಾರುಖ್ ರೆಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ತೆರೆ ಮೇಲೆ ಕಾಣಿಸಿಕೊಂಡು ನಾಲ್ಕು ವರ್ಷಗಳಾಗಿವೆ. ಅನೇಕ ಫ್ಲಾಪ್‌ ಸಿನಿಮಾಗಳ ಬಳಿಕ ಶಾರುಖ್ ಅಭಿಮಾನಿಗಳು ಪಠಾಣ್ ಸಿನಿಮಾಗಾಗಿ ಹಪಹಪಿಸುತ್ತಿದ್ದಾರೆ. ನಾಲ್ಕು ವರ್ಷಗಳ ನಂತರ ಶಾರುಖ್ ಗ್ರ್ಯಾಂಡ್ ಕಮ್ ಬ್ಯಾಕ್ ಮಾಡಲು ರೆಡಿಯಾಗುತ್ತಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ, ಶಾರುಖ್ ನಾಯಕನಾಗಿ, ದೀಪಿಕಾ ಪಡುಕೋಣೆ ನಾಯಕಿ ಮತ್ತು ಜಾನ್ ಅಬ್ರಹಾಂ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಬಾಲಿವುಡ್‌ನ ಟಾಪ್ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ.

ಇತ್ತೀಚೆಗಷ್ಟೇ ಪಠಾಣ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ್ರೆ ಇದೊಂದು ಸೂಪರ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಅನ್ನಿಸುತ್ತಿದೆ. ಶಾರುಖ್ ಅಭಿಮಾನಿಗಳು ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಪಠಾಣ್ ಚಿತ್ರ ಜನವರಿ 25 ರಂದು ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಬಗ್ಗೆ ಈಗಾಗಲೇ ಉತ್ತಮ ನಿರೀಕ್ಷೆಗಳಿದ್ದು, ಇತ್ತೀಚೆಗಷ್ಟೇ ನಿರ್ಮಾಣ ಸಂಸ್ಥೆ ಕೆಲವು ಸಾಹಸ ದೃಶ್ಯಗಳ ಫೋಟೋಗಳನ್ನು ಶೇರ್ ಮಾಡಿದ್ದು, ಟ್ವೀಟ್ ಮಾಡುವ ಮೂಲಕ ಸಿನಿಮಾದ ಹೈಪ್ ಹೆಚ್ಚಿಸಿದೆ.

ಈ ಟ್ವೀಟ್ ನಲ್ಲಿ.. 8 ದೇಶಗಳಲ್ಲಿ 3 ಸೂಪರ್ ಸ್ಟಾರ್ ಗಳ ಜೊತೆ ಪಠಾಣ್ ಸಿನಿಮಾ ಮಾಡಿದ್ದೇವೆ. ಚಿತ್ರದ ಸಾಹಸ ದೃಶ್ಯಗಳನ್ನು ಸ್ಪೇನ್, ಯುಎಇ, ಟರ್ಕಿ, ರಷ್ಯಾ, ಸರ್ಬಿಯಾ, ಇಟಲಿ, ಫ್ರಾನ್ಸ್ ಮತ್ತು ಅಫ್ಘಾನಿಸ್ತಾನದಲ್ಲಿ ಚಿತ್ರೀಕರಿಸಲಾಗಿದೆ. ಜನವರಿ 25ರಂದು ಚಿತ್ರಮಂದಿರಗಳಲ್ಲಿ ನಿಮ್ಮ ಮುಂದೆ ಬರಲಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇದರಿಂದ ಶಾರುಖ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಸಿನಿಮಾದ ನಂತರ ಶಾರುಖ್ ಇನ್ನೆರಡು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಅಟ್ಲಿ ನಿರ್ದೇಶನದ ‘ಜವಾನ್’ ಮತ್ತು ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡುಂಕಿ ಸಿನಿಮಾಗಳಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!