ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕು ವರ್ಷದ ನಂತರ ಶಾರುಖ್ ಖಾನ್ ಕಂಬ್ಯಾಕ್ ಮಾಡುತ್ತಿದ್ದು, ಸಿಕ್ಕಾಪಟ್ಟೆ ನಿರೀಕ್ಷೆ ಹೆಚ್ಚಾಗಿದೆ. ದಾಖಲೆ ಮೇಲೆ ದಾಖಲೆ ಬರೆಯೋ ನಿರೀಕ್ಷೆ ಪಠಾಣ್ ಮೇಲಿದ್ದು, ಇದೀಗ ಅಡ್ವಾನ್ಸ್ ಬುಕ್ಕಿಂಗ್ನಲ್ಲಿ ಕೆಜಿಎಫ್ ದಾಖಲೆಯನ್ನು ಪಠಾಣ್ ಮುರಿದಿದೆ ಎನ್ನಲಾಗಿದೆ.
ಇಲ್ಲಿವರೆಗೆ ಈಗಾಗಲೇ 4.10ಲಕ್ಷ ಟಿಕೆಟ್ಗಳು ಮಲ್ಟಿಪ್ಲೆಕ್ಸ್ನಲ್ಲಿ ಮಾರಾಟ ಆಗಿವೆ. ಇಂದು ರಾತ್ರಿ ವೇಳೆಗೆ ಈ ಸಂಖ್ಯೆ 5.25ಲಕ್ಷ ದಾಟುವ ಸೂಚನೆ ಇದೆ. ಕೆಜಿಎಫ್ -2 ಸಿನಿಮಾದ ಹಿಂದಿ ವರ್ಷನ್ ಅಡ್ವಾನ್ಸ್ ಬುಕ್ಕಿಂಗ್ನಲ್ಲಿ 5.15 ಲಕ್ಷ ಟಿಕೆಟ್ಗಳು ಮಾರಾಟ ಆಗಿದ್ದವು.