JAN BORN | ಜನವರಿಯಲ್ಲಿ ಹುಟ್ಟಿದವರಿಗೆ ತಾಳ್ಮೆ ಹೆಚ್ಚಂತೆ! ಇನ್ಯಾವ ಗುಣಗಳಿವೆ ನೋಡಿ..

ಪ್ರತಿ ತಿಂಗಳಲ್ಲಿ ಹುಟ್ಟಿದವರಿಗೂ ವಿಭಿನ್ನವಾದ ಗುಣಗಳು ಇರುತ್ತವೆ. ಜನವರಿಯಲ್ಲಿಯಲ್ಲಿ ಹುಟ್ಟಿದವರಿಗೆ ತಾಳ್ಮೆ ಹೆಚ್ಚಂತೆ, ಯಾವುದೇ ಸಂದರ್ಭ ಬಂದರೂ ಇವರು ತಾಳ್ಮೆ ಕಳೆದುಕೊಳ್ಳುವುದಿಲ್ಲವಂತೆ, ಇನ್ನೂ ಯಾವ ಗುಣಲಕ್ಷಣಗಳಿವೆ ನೋಡಿ..

  • ಧಾರಾಳ ಸ್ವಭಾವದವರು, ತಮ್ಮ ವಸ್ತುಗಳನ್ನು ಇತರರಿಗೆ ಬಿಟ್ಟುಕೊಡುವ ಗುಣ ಇವರಿಗಿದೆ.
  • ಕ್ರೈಸಿಸ್‌ನಲ್ಲಿ ಇವರು ಶಾಂತವಾಗಿದ್ದು ಯೋಚಿಸುತ್ತಾರೆ. ಏನು ಮಾಡಬೇಕೋ ಅದನ್ನು ಮಾಡಿ ಗೆಲ್ಲುತ್ತಾರೆ.
  • ಇವರ ತಮಾಷೆ ಗುಣ ಎಲ್ಲರಿಗೂ ಇಷ್ಟ, ತಮ್ಮ ಜೋಕ್ಸ್‌ನಿಂದ ಜನರನ್ನು ಆಕರ್ಷಿಸುತ್ತಾರೆ.
  • ಬೇರೆಯವರ ಅಡಿಯಲ್ಲಿ ಕೆಲಸ ಮಾಡಲು ಇವರಿಗೆ ಇಷ್ಟ ಇಲ್ಲ. ತಮ್ಮದೇ ಬಾಸ್ ತಾವೇ ಆಗಬೇಕು ಅನ್ನೋ ಮನೋಭಾವ ಇವರದ್ದು.
  • ಬೇರೆಯವರನ್ನು ನೋಡಿ ಮೋಟಿವೇಷನ್ ತೆಗೆದುಕೊಳ್ಳು ಜನ ಇವರಲ್ಲ. ಇವರ ಮನಸ್ಸಿಗೆ ಬಂದಾಗ ಮಾತ್ರ ಕೆಲಸ ಮಾಡುತ್ತಾರೆ.
  • ಲೀಡರ್ ಆಗುವ ಎಲ್ಲಾ ಗುಣಗಳು ಇವರಲ್ಲಿದೆ. ಬಾಸ್‌ಗೂ ನಾಯಕನಿಗೂ ಇರುವ ವ್ಯತ್ಯಾಸ ಇವರಿಗೆ ತಿಳಿದಿದೆ.
  • ನೋಡೋಕೆ ಸುಂದರವಾಗಿ ಇರುವ ಇವರಿಗೆ ವಯಸ್ಸಾದ್ರೂ ವಯಸ್ಸು ಕಾಣೋದಿಲ್ವಂತೆ
  • ಪ್ರೀತಿ ವಿಷಯ ಹೇಳಿಕೊಳ್ಳೋಕೆ ಇವರಿಗೆ ಧೈರ್ಯ ಇಲ್ಲ. ಈ ವಿಷಯದಲ್ಲಿ ಇವರನ್ನು ಪೆದ್ದು ಎನ್ನಬಹುದು.
  • ಯಾವ ಸಂದರ್ಭ, ಯಾವ ಜಾಗ, ಯಾವ ಜನದ ಜೊತೆ ಬಿಟ್ಟರೂ ಇವರು ಬದುಕಿಬಿಡುತ್ತಾರೆ.
  • ಒಂದು ಬಾರಿ ಯಾವುದೇ ವ್ಯಕ್ತಿ ಇಷ್ಟ ಇಲ್ಲ ಎಂದರೆ ಅವರ ಬಳಿ ಇವರು ಹೋಗೋದಿಲ್ಲ. ಅವರು ಬರೋದಕ್ಕೂ ಬಿಡೋದಿಲ್ಲ.
  • ಪಾರ್ಟಿ ಮಾಡೋದಂದ್ರೆ ಇವರಿಗೆ ಇಷ್ಟ. ಯಾರು ಯಾವಾಗ ಪಾರ್ಟಿಗೆ ಕರೆದರೂ ಇವರು ತಪ್ಪಿಸೋದಿಲ್ಲ.
  • ಬೇರೆಯವರಿಂದ ಕಲಿಯೋಕೆ, ಬೇರೆಯವರಿಗೆ ಕಲಿಸೋಕೆ ಇವರಿಗೆ ಇಷ್ಟ.
  • ಇವರ ಬಳಿ ಮಾತನಾಡುವಾಗ ಜೋಪಾನ, ಎಲ್ಲವನ್ನೂ ಮನಸ್ಸಿಗೆ ತೆಗೆದುಕೊಳ್ಳುವ ಸೂಕ್ಷ್ಮ ಸ್ವಭಾವ ಇವರದ್ದು.
  • ಇವರಿಗೆ ಜನ, ಗುಂಪು, ಕಾರ್ಯಕ್ರಮ, ಸಮಾರಂಭ ಇಷ್ಟ ಇಲ್ಲ. ಮನೆಯಲ್ಲಿ ತಮ್ಮದೇ ಗೂಡಿನೊಳಗೆ ಇರೋಕೆ ಇಷ್ಟಪಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!