Sunday, August 14, 2022

Latest Posts

ಗದಗ ಜಿಮ್ಸ್‌ನಲ್ಲಿ 3000 ಎಲ್‌ಪಿಎಂ ಆಕ್ಸಿಜನ್ ಘಟಕ ಸ್ಥಾಪಿಸಲು ಸಿಎಂಗೆ ಶಾಸಕ ಪಾಟೀಲ ಮನವಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸದಿಗಂತ ವರದಿ, ಗದಗ :

ಈಗಾಗಲೇ ಸರಕಾರದಿಂದ ಜಿಲ್ಲಾಸ್ಪತ್ರೆಗೆ 500 ಎಲ್.ಪಿ.ಎಮ. ಸಾಮರ್ಥ್ಯದ ಆಕ್ಸಿಜನ್ ಘಟಕ ಮಂಜೂರು ಮಾಡಲಾಗಿದೆ. ಆದರೆ, ಜಿಲ್ಲಾ ಆಸ್ಪತ್ರೆ 400+400 ಹಾಸಿಗೆ ಆಸ್ಪತ್ರೆ ಆಗಲಿರುವದರಿಂದ ಹಾಗೂ ಆಯುಷ್ ಆಸ್ಪತ್ರೆ ಅದೇ ಪರಿಸರದಲ್ಲಿರು ವದರಿಂದ. ಈ ಸಣ್ಣಘಟಕದ ಬದಲಾಗಿ ಕನಿಷ್ಠ 3000ಎಲ್.ಪಿ.ಎಂ ಸಾಮರ್ಥ್ಯದ ಘಟಕ ಸ್ಥಾಪಿಸುವದು ಆವಶ್ಯಕವಾಗಿದೆ ಎಂದು ಮುಖ್ಯಮಂತ್ರಿ ಅವರಿಗೆ ಶಾಸಕ ಪಾಟೀಲ ಅವರು ಆಗ್ರಹಿಸಿದ್ದಾರೆ.
ಜಿಮ್ಸ್‌ನಲ್ಲಿ 500ಎಲ್.ಪಿ.ಎಂ. ಸಾಮರ್ಥ್ಯದ ಈ ಘಟಕ ಕೇವಲ ಹೆಸರಿಗೆ ಮಾತ್ರ ಸ್ಥಾಪನೆಯಾದಂತೆ ಆಗುತ್ತದೆಯೇ ಹೊರತು ಆಸ್ಪತ್ರೆಯ ಅವಶ್ಯಕತೆಗಳನ್ನು ಪೂರೈಸಲಾರದು. ಈಗ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಘಟಕ ಒಂದು ತಾಸಿಗೆ 4-5 ಜಂಬೋ ಸಿಲೆಂಡರ್ ಮಾತ್ರ ಭರ್ತಿ ಮಾಡುತ್ತದೆ. ಅಂದರೆ ಒಂದು ದಿನಕ್ಕೆ 60-70 ಸಿಲೆಂಡರ್ ಮಾತ್ರ ಉತ್ಪಾಧನಾ ಹೊಂದಿದೆ. ಕೋವಿಡ್‌ನಂತಹ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿರುವಾಗ ಹಿನ್ನಲೆಯಲ್ಲಿ ಈ ಸಾಮರ್ಥ್ಯ ಎತಕ್ಕೂ ಸಾಲದು. ಈ ಹಿನ್ನೆಲೆಯಲ್ಲಿ 3000 ಎಲ್.ಪಿ.ಎಂ ಸಾಮರ್ಥ್ಯದ ಘಟಕ ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಅವರಲ್ಲಿ ಶಾಸಕ ಎಚ್.ಕೆ.ಪಾಟೀಲ ಅವರು ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss