Wednesday, June 29, 2022

Latest Posts

ರಾಷ್ಟ್ರಭಕ್ತಿ ನಿರ್ಮಾಣ ಮಾಡುವ ದೊಡ್ಡ ಶಕ್ತಿ ಆರ್ ಎಸ್ಎಸ್ ಗೆ ಇದೆ: ಈಶ್ವರಪ್ಪ

ಹೊಸ ದಿಗಂತ ವರದಿ, ಬಾಗಲಕೋಟೆ:

ಆರ್ ಎಸ್ ಎಸ್ ದೇಶದ ಯುವಕರಿಗೆ ರಾಷ್ಟ್ರಭಕ್ತಿ ನಿರ್ಮಾಣ ಮಾಡುವ ದೊಡ್ಡ ಶಕ್ತಿಯಾಗಿದೆ‌.ಆರ್ ಎಸ್ ಎಸ್ ಇಲ್ಲಾ ಎಂದಿದ್ದರೆ ಈ ದೇಶ ಪಾಕಿಸ್ತಾನ ಆಗಿ ಹೋಗಿರುತ್ತಿತ್ತು ಎಂದು ಸಿದ್ದರಾಮಯ್ಯ, ಡಿಕೆಶಿ ಹಾಗೂ ಎಚ್.ಡಿ. ಕುಮಾರಸ್ವಾಮಿವರ ವಿರುದ್ದ ಸಚಿವ ಕೆ.ಎಸ್. ಈಶ್ವರಪ್ಪ ಹರಿಹಾಯ್ದರು.
ನಗರದಲ್ಲಿ ಶುಕ್ರವಾರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು,ಎಲ್ಲ ಕ್ಷೇತ್ರಗಳಲ್ಲೂ ಆರ್ ಎಸ್ ಎಸ್ ಇದೆ.ರಾಷ್ಟ್ರಪತಿ, ವಿಶ್ವದ ನಾಯಕ ನರೇಂದ್ರ ಮೋದಿ, ನಾವೆಲ್ಲರೂ ಆರ್ ಎಸ್ ಎಸ್. ಹೀಗಾಗಿ ಆರ್.ಎಸ್.ಎಸ್ ದಲ್ಲಿ ತರಬೇತಿ ಪಡೆದವರು ಸಂಸ್ಕಾರ ಪಡೆದುಕೊಂಡು ರಾಷ್ಟ್ರಭಕ್ತಿ ಬೆಳೆಸಿ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆ ವಿರುದ್ದ ಹರಿಹಾಯ್ದರು.
ಮೊದಲು ಮುಸ್ಲಿಂ, ಕ್ರಿಶ್ಚನ್ ರಾಷ್ಟ್ರಗಳು ಪಾಕಿಸ್ತಾನ ಜೊತೆಗೆ ಇದ್ದವು.ಈಗ ಮೋದಿ ಪ್ರಧಾನಿಯಾದ ಬಳಿಕ ಇಡೀ ವಿಶ್ವವೇ ಮೋದಿ ಬಳಿ ಇದ್ದಾರೆ.ಇವತ್ತು ಪಾಕಿಸ್ತಾನ ಒಬ್ಬಂಟಿಯಾಗಿದೆ. ಮುಸ್ಲಿಂ, ಕ್ರಿಶ್ಚನ್ ಓಟುಗಳ ಮೇಲೆ ಕಣ್ಣಿಟ್ಟು ಆರ್ ಎಸ್ ಎಸ್ ಬೈದರೆ ತಮಗೆ ಓಟು ಕೊಡ್ತಾರೆ ಎಂಬ ಭ್ರಮೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಇವೆ ಎಂದು ಟೀಕಿಸಿದರು.
ಈಗ ದಲಿತರು, ಹಿಂದುಳಿದವರು ಬಿಜೆಪಿ ಜೊತೆ ಬಂದಾಗಿದೆ. ರಾಷ್ಟ್ರಭಕ್ತ ಮುಸ್ಲಿಂರು ಬಿಜೆಪಿಯಲ್ಲೆ ಇದ್ದಾರೆ. ಉಳಿದ ಮುಸ್ಲಿಂರು ನಮ್ಮ ಜೊತೆ ಬರ್ತಾರೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss