Thursday, August 11, 2022

Latest Posts

ರಾಷ್ಟ್ರಭಕ್ತಿ ಸಂಕಲ್ಪಿತವಾದ ಸಮಾಜವೇ ಪಂಚಮಸಾಲಿ ಸಮಾಜ: ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿಜೀ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ,  ಕಲಬುರಗಿ:

ಕರ್ನಾಟಕದ ಬಹುಸಂಖ್ಯಾತ ಸಮುದಾಯಗಳಲ್ಲಿಯೇ ಲಿಂಗಾಯತ ಪಂಚಮಸಾಲಿ ಸಮಾಜವು ಅಗ್ರಗಣ್ಯವಾಗಿದೆ. ಕೃಷಿ-ಕಾರ್ಮಿಕ ನಿರತ, ದಾಸೋಹ ರೂಪಿತ, ದರ್ಮ ಸಹಿತ, ಬೇಧ ರಹಿತ ಹಾಗೂ ರಾಷ್ಟ್ರಭಕ್ತಿ ಸಂಪಕಲ್ಪಿತವಾದ ಸಮಾಜವೇ ಪಂಚಮಸಾಲಿ ಸಮಾಜವೆಂದು ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಅವರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ದೀಕ್ಷ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಜ್ಞಾ ಪಂಚಾಯತ ರಾಜ್ಯ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ, ಸೆ.15ರಂದು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಉಡಿಯೂರಪ್ಪ ಅವರು ಸದನದಲ್ಲಿ ನೀಡಿದ ದಿನಾಂಕ ಸಮೀಪ ಬಂದಿದೆ. ಇದರ ಹಿನ್ನಲೆಯಲ್ಲಿ ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ ಎಂದರು. ಪಂಚಮಸಾಲಿ ಸಮಾಜವನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮೀಸಲಾತಿ ಅವಶ್ಯಕವಾಗಿದೆ. ಹೀಗಾಗಿ ಎಲ್ಲರೂ ನಮ್ಮ ಹೋರಾಟಕ್ಕೆ ಕೈಜೋಡಿಸಬೇಕೆಂದರು.
1 ಕೋಟಿ 40 ಲಕ್ಷ ಜನಸಂಖ್ಯೆ ಹೊಂದಿರುವ ನಾವು ನಮ್ಮ ದ್ವನಿ ಎತ್ತಿ ಇಂದು ನಮ್ಮ ಹೋರಾಟವನ್ನು ಮತ್ತೆ ಚುರುಕುಗೊಳಿಸುತ್ತಿದೇವೆ. ಸರ್ಕಾರ ಹೇಳಿದಂತೆ ನಡೆದುಕೊಂಡು ನಮಗೆ ಮೀಸಲಾತಿ ಒದಗಿಸಿ, ಹಾಗೂ ಇನ್ನೂಳಿದ ಲಿಂಗಾಯತ ಪಂಗಡಗಳನ್ನು ಓಬಿಸಿ,ಗೆ ಸೇರಿಸಲು ಆಗ್ರಹಿಸಿದರು. ವಿಧಾನ ಸೌಧದ ಅದಿವೇಶನದಲ್ಲಿ ಸರ್ಕಾರ ಕೊಟ್ಟಂತಹ ಮಾತನ್ನು ನೆನಪಿಸಿ, ಮೀಸಲಾತಿ ಹಕ್ಕನ್ನು ಪಡೆಯೋಣ ಹಾಗೂ ನುಡಿದಂತೆ ನಡೆಯಿರಿ -ಮೀಸಲಾತಿಯನ್ನು ನೀಡಿರಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡೋಣ ಎಂದರು.
ಒಂದು ವೇಳೆ ಸರ್ಕಾರ ನುಡಿದಂತೆ ನಡೆಯದೇ ಹೋದರೆ ನಾವು ನಮ್ಮ ಪೀಠಕ್ಕೆ ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ಅಭಿಯಾನವು ಮಲೈಮಹದೇಶ್ವರ ಬೆಟ್ಟದ ಶಕ್ತಿ ಪೀಠದಿಂದ ಪ್ರಾರಂಭವಾಗಿ ಮೈಸೂರು-ಕಿತ್ತೂರು-ಕಲ್ಯಾಣ ಕರ್ನಾಟಕದ ಮೂಲಕ ಬೆಂಗಳೂರಿನ ವಿಧಾನಸೌಧದ ಆಡಳಿತ ಪೀಠದವರಗೆ ಸಾಗಲಿದೆ ಎಂದರು.
ಅಖಿಲ ಭಾರತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅದ್ಯಕ್ಷರು ವಿಜಯನಂದ ಕಾಶಪ್ಪನವರ ಹಾಗೂ ಮಾಜಿ ಶಾಸಕ ಬಿ.ಆರ್.ಪಾಟೀಲ ಮಾತನಾಡಿದರು. ಶರಣು ಪಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣಕುಮಾರ ಪಾಟೀಲ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಟೀಲ, ರಾಜಕುಮಾರ ಕಡಗಂಚಿ, ಶರಣು ಭೂಸನೂರ, ಕಲ್ಯಾಣಪ್ಪ ಮಳಖೇಡ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss