ಸಂಜೆಯಾಗುತ್ತಿದ್ದಂತೆ ಏನಾದರೂ ಸ್ನಾಕ್ಸ್ ಬೇಕೇ ಬೇಕು. ಅದರಲ್ಲೂ ಮಳೆ ಬಂದುಬಿಟ್ಟರಂತೂ ಖಾರವಾದ ಸ್ನಾಕ್ಸ್ ಬೇಕು. ಇಂದು ಪಾವ್ ಭಾಜಿ ಮಾಡೋದು ಹೇಗೆ ನೋಡೋಣ ಬನ್ನಿ..
ಮಾಡುವ ವಿಧಾನ
- ಮೊದಲು ಕುಕ್ಕರ್ಗೆ ಬಟಾಣಿ, ಆಲೂಗಡ್ಡೆ ಹಾಗೂ ಕೋಸು ಹಾಕಿ ಕೂಗಿಸಿಕೊಳ್ಳಿ.
- ವಿಶಲ್ ಆರಿದ ನಂತರ ತರಕಾರಿಗಳನ್ನು ಚೆನ್ನಾಗಿ ಸ್ಮಾಶ್ ಮಾಡಿಕೊಳ್ಳಿ.
- ನಂತರ ಪ್ಯಾನ್ಗೆ ಒಂದು ಸ್ಪೂನ್ ಬೆಣ್ಣೆ, ಎಣ್ಣೆ ಹಾಕಿ.
- ಇದಕ್ಕೆ ಈರುಳ್ಳಿ ಹಾಕಿ, ನಂತರ ಹಸಿಮೆಣಸು, ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ.
- ನಂತರ ಸ್ವಲ್ಪ ಕ್ಯಾಪ್ಸಿಕಂ ಹಾಕಿ.
- ನಂತರ ಸ್ವಲ್ಪ ಟೊಮ್ಯಾಟೊ ಹಾಕಿ ಉಪ್ಪು ಹಾಕಿ.
- ನಂತರ ಸ್ವಲ್ಪ ಖಾರದಪುಡಿ,ಪಾವ್ ಭಾಜಿ ಮಸಾಲಾ ಹಾಕಿ.
- ನಂತರ ಈ ಮಸಾಲಾಗೆ ಬೇಯಿಸಿದ ತರಕಾರಿಯನ್ನು ಹಾಕಿ.
- ನಂತರ ಟೇಸ್ಟ್ ನೋಡಿಕೊಂಡು ಉಪ್ಪು ಖಾರ ಸರಿ ಮಾಡಿಕೊಳ್ಳಿ.
- ಇನ್ನೊಂದು ಪ್ಯಾನ್ಗೆ ಬೆಣ್ಣೆ ಹಾಕಿ ಪಾವ್ ಬಿಸಿ ಮಾಡಿಕೊಂಡು, ಹಸಿ ಈರುಳ್ಳಿಜೊತೆಗೆ ತಿನ್ನಿ.