ಪಿಡಿಒ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ: ರಾಯಚೂರಿನಲ್ಲಿ ಗಲಾಟೆ ಮಾಡಿದ 12 ಪರೀಕ್ಷಾರ್ಥಿಗಳ ವಿರುದ್ದ FIR

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಿನ್ನೆ ನಡೆದಿದ್ದ ಪಿಡಿಒ ಹುದ್ದೆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷೆ ವೇಳೆ ಗಲಾಟೆಗೆ ಕಾರಣವಾಗಿದ್ದ 12 ಜನ ಪರೀಕ್ಷಾರ್ಥಿಗಳ ವಿರುದ್ದ ಜಿಲ್ಲೆಯ ಸಿಂಧನೂರು ಟೌನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಿಂಧನೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಿಂದ ವಿವಾದ ಶುರುವಾಗಿತ್ತು. ಪ್ರಶ್ನೆ ಪತ್ರಿಕೆ ಲೀಕ್​ ಎಂದು ಆರೋಪಿಸಿ ಪರೀಕ್ಷೆ ಬಹಿಷ್ಕರಿಸಿ ಅಭ್ಯರ್ಥಿಗಳು ಹೋರಾಟ ಮಾಡಿದ್ದರು.

ಪರೀಕ್ಷಾ ಮೇಲ್ವಿಚಾರಕ ಬಸವರಾಜ ತಡಕಲ್​ರಿಂದ ದೂರು ನೀಡಿದ್ದು, ಪಶುಪತಿ, ಬಾಬು, ಅಯ್ಯನಗೌಡ, ಅಮಿತ್, ವೆಂಕಟೇಶ್ ಸೇರಿ 12 ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ 12 ಜನರು ಯಾದಗಿರಿ ಮೂಲದರು ಎನ್ನಲಾಗಿದೆ. ಸುಳ್ಳು ಸುದ್ದಿ ಹಬ್ಬಿಸಿರುವುದು, ಪ್ರಚೋದನೆ, ರಸ್ತೆ ತಡೆದು ಪ್ರತಿಭಟನೆ ಆರೋಪದಡಿ ಎಫ್​ಐಆರ್​ ದಾಖಲಿಸಲಾಗಿದೆ. ಪಶುಪತಿ ಎಂಬ ಅಭ್ಯರ್ಥಿ ಘಟನೆಗೆ ಕಾರಣ ಅಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೊಠಡಿ ಸಂಖ್ಯೆ 05 ರಲ್ಲಿದ್ದ ಅಭ್ಯರ್ಥಿ ಪಶುಪತಿ, ಪರೀಕ್ಷೆ ಬುಕ್ ಲೆಟ್ ನೀಡುವ ವೇಳೆ ನಮ್ಮ ಎದುರು ಸೀಲ್ ಓಪನ್ ಮಾಡಿಲ್ಲ. ಮೊದಲೇ ಓಪನ್ ಮಾಡಿದ್ದಿರಿ ಅಂತ ಪರೀಕ್ಷಾ ಸಂಯೋಜಕರೊಂದಿಗೆ ವಾಗ್ವಾದ ಮಾಡಿದ್ದಾರೆ. ಬಳಿಕ ಇತರೆ ರೂಂ ಗಳಿಗೆ ತೆರಳಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಅಂತ ಎಲ್ಲರನ್ನ ಸೇರಿಸಿ ಗಲಾಟೆಗೆ ಕಾರಣವಾದ ಆರೋಪ ಮಾಡಲಾಗಿದೆ. ಹೀಗಾಗಿ ಪಶುಪತಿಯನ್ನು ಬಂಧಿಸಿ ಸ್ಟೇಷನ್ ಬೇಲ್ ಮೇಲೆ ಪೊಲೀಸರು ಬಿಟ್ಟಿದ್ದಾರೆ.

ಇನ್ನು ಪಿಡಿಒ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಅಭ್ಯರ್ಥಿಗಳು ಕುಷ್ಟಗಿ- ಸಿಂಧನೂರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಭೇಟಿ ನೀಡಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!