ಗಿನ್ನಿಸ್ ದಾಖಲೆಗೆ ಪೇಡಾ ನಗರಿ ಸಜ್ಜು – 10 ಲಕ್ಷ ಜನರಿಂದ ಬೃಹತ್ ಯೋಗಾಥಾನ್

– ಮಹಾಂತೇಶ ಕಣವಿ

ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಇದೇ ಮೊದಲ ಬಾರಿ ನಡೆಯುವ 26ನೇ ರಾಷ್ಟ್ರೀಯ ಯುವಜನೋತ್ಸವ ಹಲವು ವಿಶೇಷತೆಗಳಿಂದ ಕೂಡಿದ್ದು ಯೋಗದ ಮೂಲಕ ಗಿನ್ನಿಸ್ ದಾಖಲೆಗೆ ಮುಂದಾಗಿದೆ.

ಧಾರವಾಡ ಯುವಜನೋತ್ಸವದಲ್ಲಿ ಯೋಗಾಥನ್ ಆಯೋಜಿಸುವ ಮೂಲಕ ಕರ್ನಾಟಕ ದೇಶದ ಮೊದಲ ಯೋಗ ಸಾಕ್ಷರತಾ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತ ದೃಢ ಹೆಜ್ಜೆ ಇರಿಸಿದ್ದು ವಿಶೇಷ.

ಜ. 15ಕ್ಕೆ 10 ಸಾವಿರ ಯೋಗ ಬೋಧಕರು, 10 ಲಕ್ಷ ಜನ ಯೋಗಾಸಕ್ತರು ಈ ದಾಖಲೆಗೆ ಮುಂದಾಗಿದ್ದಾರೆ. ಅವಳಿ ನಗರದ ಕವಿವಿ ರಾಣಿ ಚನ್ನಮ್ಮ ಕ್ರೀಡಾಂಗಣ, ಕೃಷಿ ವಿವಿ ಕ್ರೀಡಾಂಗಣ, ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣ, ಹುಬ್ಬಳ್ಳಿ ರೈಲ್ವೆ ಕ್ರಿಕೆಟ್ ಮೈದಾನಗಳಲ್ಲಿ ಬೆಳಗ್ಗೆ 6:30 ರಿಂದ 9:30ರ ವರೆಗೆ ಯೋಗಥಾನ್ ನಡೆಯಲಿದೆ. ಇದರಲ್ಲಿ ವಿವಿಧ ರಾಜ್ಯಗಳ 7500 ಪ್ರತಿನಿಧಿಗಳು ಧಾರವಾಡ ಜಿಲ್ಲೆಯ 22,000 ಯೋಗಾಸಕ್ತರು ಪಾಲ್ಗೊಳ್ಳುವರು.

13 ಲಕ್ಷ ವಿದ್ಯಾರ್ಥಿಗಳು 12,000 ಯೋಗ ಬೋಧಕರು 8,000ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ಈಗಾಗಲೇ www.yogathon2022.com  ವೆಬ್ ಪೋರ್ಟಲ್ ನಲ್ಲಿ ಯೋಗಾಥಾನ್ ಗೆ  ನೊಂದಾಯಿಸಿಕೊಂಡಿದ್ದಾರೆ.

ಈ ಹಿಂದೆ ರಾಜಸ್ಥಾನದಲ್ಲಿ ಸುಮಾರು 1.6 ಲಕ್ಷ ಜನ ನಿರ್ಮಿಸಿದ ಯೋಗ ದಾಖಲೆ ಈ ಯೋಗಾಥನ್ ಅಳಿಸಿ ಹಾಕಲಿದೆ. ಇದರಿಂದ ಕರ್ನಾಟಕ ದೇಶದ ಮೊದಲ ಯೋಗ ಸಾಕ್ಷರತಾ ರಾಜ್ಯವಾಗಿ ಹೊರಹೊಮ್ಮಲಿದೆ.

ಯೋಗಾಥಾನನಿಂದ 100 ವಿದ್ಯಾರ್ಥಿಗಳನ್ನು ಯೋಗ ಸರ್ಟಿಫಿಕೆಶನ್ ಬೋರ್ಡ್ ನ ಯೋಗಾ ಫಾರ್ ವೆಲ್ ನೆಸ್ ಗೆ ದಾಖಲಿಸಲು ಶಿಕ್ಷಣ ಸಂಸ್ಥೆಗೆ ₹ 10 ಸಾವಿರ ಪ್ರೋತ್ಸಾಹ ಧನ ಯೋಗ ಸರ್ಟಿಫಿಕೆಶನ್ ಬೋರ್ಡ್ ನೀಡಲಿದೆ. ಯೋಗಾಥಾನ್ ಗೆ ನೋಂದಾಯಿಸಿದ ಪ್ರಥಮ 3 ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗೆ ಬಹುಮಾನ ನೀಡಲಿದೆ. 500-1000 ವಿದ್ಯಾರ್ಥಿಗಳು ಬರುವ ಶಿಕ್ಷಣ ಸಂಸ್ಥೆಗಳಿಗೆ ಪ್ರಾಮಾಣಿಕೃತ ಯೋಗ ಕೇಂದ್ರ ಎಂದು ಗುರುತಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!