Sunday, April 11, 2021

Latest Posts

ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವು

ಹೊಸದಿಗಂತ ವರದಿ,ಮೈಸೂರು:

ಹಬ್ಬಕ್ಕೆಂದು ರಸ್ತೆಯಲ್ಲಿ ತೆರಳುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದಲ್ಲಿ ನಡೆದಿದೆ.
ನಂಜನಗೂಡು ತಾಲ್ಲೂಕಿನ ಕಣೆನೂರು ಗ್ರಾಮದ ಮರಿಗೌಡ (55) ಮೃತಪಟ್ಟವರು. ಕಳಲೆಯಲ್ಲಿನ ಹಬ್ಬಕ್ಕೆಂದು ತೆರಳಲು ನಂಜನಗೂಡು ಗುಂಡ್ಲುಪೇಟೆ ರಸ್ತೆ ಮುದ್ದಳ್ಳಿ ಗೇಟ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡರು. ವಿಷಯ ತಿಳಿದ ನಂಜನಗೂಡು ಸಂಚಾರ ಠಾಣೆ ಎಸ್‌ಐ ಲೋಹಿತ್ ತಕ್ಷಣ ಸ್ಥಳಕ್ಕೆ ಧಾವಿಸಿ, ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಕಾರನ್ನು ಮಾಲೀಕ ಸಂಚಾರ ಠಾಣೆಗೆ ತಂದು ಬಿಟ್ಟಿದ್ದಾರೆ. ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss