ಪಿಂಚಣಿದಾರ ಮಹಿಳೆಯ ಅಕೌಂಟ್ ಬ್ಲಾಕ್‌: ಬ್ಯಾಂಕ್ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಚಾಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೆಚ್ಚಿನ ಪಿಂಚಣಿ ಪಾವತಿಸಿ ಬಳಿಕ ವೃದ್ಧೆ ಬ್ಯಾಂಕ್ ಅಕೌಂಟ್ ಸ್ಥಗಿತಗೊಳಿಸಿದ್ದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಏಕಸದಸ್ಯಪೀಠ ಅಸಮಾಧಾನ ವ್ಯಕ್ತಪಡಿಸಿದ್ದು, ಹೆಚ್ಚುವರಿ ಪಿಂಚಣಿ ಬ್ಯಾಂಕ್ ಅಧಿಕಾರಿಗಳಿಂದ ವಸೂಲಿಗೆ ಆದೇಶಿಸಲಾಗಿದೆ.

ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಹಿರಿಯ ನಾಗರಿಕರ ಸಮಸ್ಯೆಗಳಿಗೆ ಕಣ್ಣು ಕುರುಡಾಗಬಾರದು. ಕಾಳಜಿ, ಸಹಾನುಭೂತಿ ಅವಶ್ಯಕತೆ ಎಂದು ಹೈಕೋರ್ಟ್ ಹೇಳಿದೆ. ಪಿಂಚಣಿದಾರರ ಧ್ವನಿಗೆ ಸರ್ಕಾರಿ ಸಂಸ್ಥೆಗಳ ಕಿವಿ ಕಿವುಡಾಗಬಾರದು.  2016 ರಿಂದಲೂ ಸಮಸ್ಯೆ ಬಗೆಹರಿಸಲು ಬ್ಯಾಂಕ್ ನಿರ್ಲಕ್ಷ ತೋರಿದ ಹಿನ್ನೆಲೆಯಲ್ಲಿ ಪಿಂಚಣಿದಾರ ಮಹಿಳೆಯಿಂದ ಹಣ ವಸೂಲಿ ಮಾಡದಂತೆ ಆದೇಶಿಸಲಾಗಿದೆ.

2016ರಲ್ಲಿ ವೃದ್ಧೆ ನಂದಿನಿದೇವಿ ಅವರ ಖಾತೆಯನ್ನು ಬ್ಯಾಂಕ್ ಸ್ಥಗಿತಗೊಳಿಸಿತ್ತು. ಹೆಚ್ಚುವರಿ ಪಿಂಚಣಿ ಹಿಂಪಡೆಯುವಂತೆ ಕೋರಿದರೂ ಸಿಬ್ಬಂದಿ ಸ್ಪಂದಿಸಿರಲಿಲ್ಲ. 2016 ರಲ್ಲಿ ಹೆಚ್ಚುವರಿ ಪಿಂಚಣಿ 50,000 ರೂ. ಪಾವತಿಸಲಾಗಿತ್ತು.

ಹೆಚ್ಚುವರಿಯಾಗಿ ಪಾವತಿಯಾದ ಪಿಂಚಣಿ ಹಣವನ್ನು ಒಂದೇ ಬಾರಿಗೆ ಹಿಂತಿರುಗಿಸುವಂತೆ ಕೇಳುವ ಬದಲು ಪ್ರತಿ ತಿಂಗಳೂ ಪಿಂಚಣಿಯಿಂದ 3 ಸಾವಿರದಂತೆ ಕಡಿತ ಮಾಡುವಂತೆ ಮನವಿ ಮಾಡಿದ್ದಾರೆ. ಇವರ ಮನವಿಗೆ ಬ್ಯಾಂಕ್ ಸ್ಪಂದಿಸದ ಕಾರಣ ನಳಿನಿ ದೇವಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!