VIRAL VIDEO| ಏನು ಟೈಪಿಂಗ್ ಗುರುವೇ? ಫಾರ್ಮಸಿ ಉದ್ಯೋಗಿಯ ಕರಾಮತ್ತು ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಲ್ಲರೂ ಕೈಬರಹ ಮರೆಯುತ್ತಿರುವ ಕಾಲವಿದು..ಮೊಬೈಲ್ ಫೋನ್, ಕಂಪ್ಯೂಟರ್ ಪರದೆಯ ಮುಂದೆ ಕುಳಿತರೆ ಕೈಬೆರಳುಗಳದ್ದೇ ಕೆಲಸ. ಬಹುತೇಕ ಜನರಲ್ಲಿ ಅತ್ಯುತ್ತಮ ಟೈಪಿಂಗ್ ಕೌಶಲ್ಯವಿದೆ. ಕಂಪ್ಯೂಟರ್ ಕೀಬೋರ್ಡ್ ಮೇಲೆ ಬೆರಳುಗಳಿಂದ ಟೈಪ್ ಮಾಡುವುದು. ಆದರೆ ಈ ಫಾರ್ಮಸಿ ಉದ್ಯೋಗಿ ಬಹಳ ವಿಶೇಷ. ಹೌದು ಅವರ ಅದ್ಭುತ ಟೈಪಿಂಗ್ ಸ್ಪೀಡ್ ನೋಡಿ ನೀವೂ ಬೆರಗಾಗುತ್ತೀರಿ. ಬಿಲ್ಲಿಂಗ್ ಕೌಂಟರ್ ಬಳಿ ಕುಳಿತಿದ್ದ ಫಾರ್ಮಸಿ ಉದ್ಯೋಗಿ ಗ್ರಾಹಕರಿಗೆ ಬಿಲ್ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಅವನು ಕಂಪ್ಯೂಟರಿನಲ್ಲಿ ಟೈಪ್ ಮಾಡುತ್ತಿದ್ದಾನೋ…ಓಡುತ್ತಿದ್ದಾನೋ ಎಂಬುದೇ ಅರ್ಥವಾಗುತ್ತಿಲ್ಲ. ಅವನ ಟೈಪಿಂಗ್ ಎಷ್ಟು ವೇಗವಾಗಿದೆಯೆಂದರೆ ನಮ್ಮ ಕಣ್ಣುಗಳನ್ನೂ ಒಂದು ಕ್ಷಣ ವಿಚಲಿತಗೊಳಿಸುತ್ತದೆ.

ಔಷಧಿ ಕೋಡ್‌ಗಳನ್ನು ಟೈಪ್ ಮಾಡುವಾಗ ಒಂದರ ನಂತರ ಒಂದರಂತೆ ಔಷಧಿಗಳನ್ನು ತೆಗೆದುಕೊಳ್ಳುತ್ತಾ ಕಂಪ್ಯೂಟರ್‌ನಲ್ಲಿ ಬೆರಳುಗಳನ್ನು ಓಡಿಸುತ್ತಿದ್ದಾರೆ. ಅವನು ನಿಜವಾಗಿಯೂ ಕೀಬೋರ್ಡ್ ನೋಡುತ್ತಿದ್ದಾನೋ ಇಲ್ಲವೋ? ಆದರೆ ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉದ್ಯೋಗಿಯ ಟೈಪಿಂಗ್ ಕೌಶಲ್ಯವನ್ನು ಜನರು ಮೆಚ್ಚುತ್ತಿದ್ದಾರೆ. ವಾವ್ ಅವರು ತುಂಬಾ ವೇಗವಾಗಿ ಟೈಪ್ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅವರದ್ದು ವಿಶೇಷ ಪ್ರತಿಭೆ..ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!