ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಹೆಚ್ಚು ಸಮಯದ ಕಾಲ ಸಾಮಾಜಿಕ ಜಾಲತಾಣದಲ್ಲಿ ಯಾವ ನಟಿಯರು ಆಕ್ಟೀವ್ ಆಗಿಲ್ಲವೋ ಅವರು ಪ್ರೆಗ್ನೆಂಟ್ ಇರಬಹುದು ಎಂಬ ನಿರ್ಧಾರಕ್ಕೆ ಅಭಿಮಾನಿಗಳು ಬಂದುಬಿಡುತ್ತಾರೆ.
ಇಂಥದ್ದೇ ಪರಿಸ್ಥಿತಿ ಅನುಭವಿಸುತ್ತಿದ್ದಾರೆ ದೀಪಿಕಾ ಪಡುಕೋಣ್ ಹಾಗೂ ರಣ್ವೀರ್ ಸಿಂಗ್.
ವಿಚಿತ್ರ ಏನಂದರೆ ರಣ್ವೀರ್ ಅಪ್ಪ ಆಗ್ತಿದ್ದಾರಾ ಅನ್ನೋ ಪ್ರಶ್ನೆಯನ್ನು ಪರಿಣಿತಿ ಚೋಪ್ರಾಗೆ ಅಭಿಮಾನಿಗಳು ಕೇಳುತ್ತಿದ್ದಾರೆ.
ಈಗಾಗಲೇ ರಣ್ವೀರ್ ಸಿಂಗ್ ಜೊತೆ ಎರಡು ಸಿನಿಮಾ ಮಾಡಿರುವ ಪರಿಣಿತಿ ದೀಪಿಕಾ ಫ್ಯಾಮಿಲಿಗೆ ಕ್ಲೋಸ್ ಇದ್ದಾರೆ. ರಣ್ವೀರ್ ತಂದೆ ಆಗುತ್ತಿದ್ದರೆ ಪರಿಗೆ ಗೊತ್ತಿರಬಹುದು ಅನ್ನೋ ಕಾರಣಕ್ಕೆ ಅಭಿಮಾನಿಗಳು ಪ್ರಶ್ನೆ ಮಾಡಿರಬಹುದು. ಈ ಪ್ರಶ್ನೆಗೆ ಉತ್ತರವಾಗಿ ಪರಿಣಿತಿ ರಣ್ವೀರ್ ಇದಕ್ಕೆ ಉತ್ತರ ಕೊಡಿ ಎಂದು ನೇರ ಟ್ಯಾಗ್ ಮಾಡಿದ್ದಾರೆ.